ಮೂಲ್ಕಿ ನಗರ ಪಂ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ

 ಮೂಲ್ಕಿ : ಮೂಲ್ಕಿ ನಗರ ಪಂಚಾಯತಿ ಮಾಸಿಕ ಸಭೆಯಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರ ದುರ್ವರ್ತನೆ, ಮಲೇರಿಯಾ ನಿಯಂತ್ರಣ, ಹಳೆಯಂಗಡಿ ಪಂಚಾಯತಿಯಿಂದ ತುಂಬೆ ನೀರಿನ ಬಾಕಿ, ಆಸ್ತಿ ತೆರಿಗೆ ಹೆಚ್ಚಳ, ಪ್ಲಾಸ್ಟಿಕ್ ಬ್ಯಾನರ್ ನಿಷೇಧ ಮುಂತಾದ ಬಗ್ಗೆ ತೀವ್ರ ಚರ್ಚೆ ನಡೆಯಿತು.

ಕಳೆದ ದಿನಗಳ ಹಿಂದೆ ಹಳೆಯಂಗಡಿ ಸಮೀಪದ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ರಿಕ್ಷಾ ಚಾಲಕನ ಶವವನ್ನು ಸರಕಾರಿ ಆಸ್ಪತ್ರೆಗೆ ತಂದು ಶವ ಮಹಜರು ಬಗ್ಗೆ ವಿಳಂಬ ನಡೆಸಿ ಉದ್ದಟತನ ತೋರಿಸ ವೈದ್ಯರ ಬಗ್ಗೆ  ಮೂಲ್ಕಿ ನ ಪಂ ಮಾಜೀ ಅಧ್ಯಕ್ಷ ಆಸೀಫ್ ಅತೃಪ್ತಿ ವ್ಯಕ್ತಪಡಿಸಿ ಸರಕಾರಿ ಅಧಿಕಾರಿಗಳು ಆ ಸಮಯದಲ್ಲಿ ಸಮಾಧಾನದಿಂದ ವರ್ತಿಸಬೇಕು ಎಂದು ಸಲಹೆ ನೀಡಿದಾಗ ವೈದ್ಯ ಇರ್ಫಾನ್ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ತಿಳಿಸಿದರು.

ಸರಕಾರದ ಸೂಚನೆಯಂತೆ ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕಿದ್ದು, ಬುಧವಾರ ನಡೆದ ನ ಪಂ ಮಾಸಿಕ ಸಭೆಯಲ್ಲಿ ಶೇ 20ರಷ್ಟು ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.