ಖಾಝಿ ನಿಗೂಢ ಸಾವು : ಮರು ತನಿಖೆಗೆ ಅರ್ಜಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಚೆಂಬರಿಕ-ಮಂಗಳೂರು ಖಾಝಿಯಾಗಿದ್ದ ಸಿ ಎಂ ಅಬ್ದುಲ್ಲ ಮೌಲವಿ (77) ನಿಗೂಢ ಸಾವಿನ ಬಗ್ಗೆ ಹೊಸ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದ ತನಿಖೆಯನ್ನು ಪುನರಾರಂಭಿಸುವಂತೆ ಕೋರಿ ಮಲಪ್ಪುರಂ ನಿವಾಸಿ ಮೊಹಮ್ಮದ್ ತಯ್ಯಿಬ್ ಹುದವಿ ಎಂಬವರು ಕೊಚ್ಚಿ ಯ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 2010 ಫೆಬ್ರವರಿ 15ರಂದು ಖಾಝಿ ಸಮುದ್ರ ಸಮೀಪದ ಕಗ್ಗಲ್ಲಿನಲ್ಲಿ ನಿಗೂಢವಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದರು. ಈ ಬಗ್ಗೆ ಸ್ಥಳೀಯ ಪೆÇಲೀಸರು, ಕ್ರೈಂ ಬ್ರಾಂಚ್ ಪೆÇಲೀಸರು, ಬಳಿಕ ಸಿಬಿಐ ತನಿಖೆ ನಡೆಸಿದ್ದರೂ ಸಾವಿನ ತನಿಖೆ ನಿಗೂಢವಾಗಿಯೇ ಉಳಿದಿತ್ತು.

LEAVE A REPLY