ಬಕ್ರೀದ್ ಹಬ್ಬದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎಸಿಪಿ ಮೂಲಕ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವತಿಯಿಂದ ಜಿಲ್ಲಾಧ್ಯಕ್ಷ ಸಿ ಅಹ್ಮದ್ ಜಮಾಲ್ ಮನವಿ ನೀಡಿದರು.

ಹಬ್ಬದ ಸಂದರ್ಭದಲ್ಲಿ ಗೋ ಸಾಗಾಟಗಾರರಿಗೆ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ನೀಡುವಂತೆ ಮುಖಂಡರು ವಿನಂತಿಸಿಕೊಂಡರು.

ಗಣೇಶೋತ್ಸವ ಸಂದರ್ಭದಲ್ಲಿ ಇನ್ನೊಂದು ಸಮಾಜಕ್ಕೆ ನೋವಾಗುವ ರೀತಿ ಟ್ಯಾಬ್ಲೋದಲ್ಲಿ ಚಿತ್ರೀಕರಿಸುವುದು, ಪಂಜಿಮೊಗರುವಿನ ತಾಯಿ ಮಗಳ ಜೋಡಿ ಕೊಲೆ ಪ್ರಕರಣ ಬೇಧಿಸಲು ಹಾಗೂ ಕಾವ್ಯಾ ಸಾವಿನ ಕುರಿತಾಗಿ ಜನತೆಗೆ ಸತ್ಯ ಸಂಗತಿ ತಿಳಿಸಬೇಕೆಂದು ಮುಖಂಡರು ಮನವಿಯಲ್ಲಿ ಕೋರಿಕೊಂಡರು. ನಿಯೋಗದಲ್ಲಿ ಅನೇಕರಿದ್ದರು.