ತುಳು ರಾಜ್ಯ ರಚನೆ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕರಾವಳಿ ಜಿಲ್ಲೆಯ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಕೂಡಲೇ ಸೇರಿಸಿ, ಕರಾವಳಿ ಜೆಲ್ಲೆಯನ್ನು ತುಳುನಾಡು ರಾಜ್ಯವಾಗಿ  ಘೋಷಿಸಬೇಕೆಂದು ತುಳುನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನ್‍ದಾಸ್ ಶೆಟ್ಟಿ ಆಗ್ರಹಿಸಿದ್ದಾರೆ.

ಸುದ್ದಿ ಗಾರರೊಂದಿಗೆ ಮಾತನಾಡಿದ ಶೆಟ್ಟಿ, ಆಂಧ್ರ ರಾಜ್ಯದಿಂದ ಬೇರ್ಪಟ್ಟ ತೆಲಂಗಾಣ ಮಾದರಿಯಲ್ಲಿ ತುಳು ಭಾಷೆಯನ್ನು ಸಂವಿಧಾನದ 8 ಪರಿಚ್ಛೇದದಲ್ಲಿ ಕೂಡಲೇ ಸೇರಿಸಿ ತುಳುನಾಡು ರಾಜ್ಯ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಕೋಟ್ಯಂತರ ಜನರು ಮಾತನಾಡುವ ತುಳು ಭಾಷೆಗೆ ಶಾಲೆಗಳಲ್ಲೂ ಮಾನ್ಯತೆ ಸಿಗಬೇಕು ಎಂದು ಶೆಟ್ಟಿ ಒತ್ತಾಯಿಸಿದ್ದಾರೆ.