ಉಪ್ಪಳದ ಯುಎಸ್ಸೆಲ್ ಫುಟ್ಬಾಲ್ ಪಂದ್ಯಾಟಕ್ಕೆ ಆಟಗಾರರ ಹರಾಜು

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಸಿಟಿಝನ್ ಉಪ್ಪಳ ಇವರ ಪ್ರಾಯೋಜಕತ್ವದಲ್ಲಿ ಜನವರಿ 19ರಿಂದ ಫೆಬ್ರವರಿ 10ರ ತನಕ ಮಣ್ಣಂ ಕುಝಿ ಮೈದಾನದಲ್ಲಿ ನಡೆಯಲಿರುವ ಉಪ್ಪಳ ಸೋಂಕಾಲ್ ಲೀಗ್ (ಯು ಎಸ್ ಎಲ್) ಪಂದ್ಯಾಟದ ಆಟಗಾರರ ಹರಾಜು ನಡೆಯಿತು.
ಕೈಕಂಬ ರಂಜಿತ್ ಥಿಯೇಟರ್ ಸಭಾಂಗಣದಲ್ಲಿ ನಡೆದ ಹರಾಜನ್ನು ವೀಕ್ಷಿಸಲು ನೂರಾರು ಫುಟ್ಬಾಲ್ ಪ್ರೇಮಿಗಳು ಆಗಮಿಸಿದ್ದರು. ಎಂಟು ತಂಡಗಳಿಗಾಗಿ 93 ಆಟಗಾರರನ್ನು ಹರಾಜಿನಲ್ಲಿ ಸೇರ್ಪಡೆಗೊಳಿಸಲಾಗಿತ್ತು.
ಮಾಸ್ಕ್ ಬ್ಲಾಸ್ಟರ್ಸ್, ಎಫ್ ಎನ್ ಬುಬಾಯಿ ಬುಲ್ಸ್, ಶೂಟರ್ಸ್ ಮಜಲ್, ಐ ಎಚ್ ಶೂಟರ್ಸ್ ವಳಯಂ, ಯುನೈಟಡ್ ಅಡ್ಕನ್ಸ್, ಅದೀಕ ಟೈಗರ್ಸ್, ಯುನೈಟಡ್ ಮುಟ್ಟಂ, ಎಫ್ ಸಿ ಎಸ್ ಎನ್ ಉಪ್ಪಳ ಗೇಟ್ ಎಂಬ ತಂಡಗಳು 23 ದಿನಗಳಲ್ಲಿ ನಡೆಯುವ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ.