ಪ್ಲಾಸ್ಟಿಕ್ ನಿರ್ಮೂಲನಾ ಆಂದೋಲನಾ

ಹಸಿರು ಕೇರಳದ ಫಲಕ ಹಿಡಿದು ಸಾಗಿದ ವಿದ್ಯಾರ್ಥಿ, ಅದ್ಯಾಪಕರು

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಹಸಿರು ಕೇರಳದ ಅಂಗವಾಗಿ ನವಜೀವನ ಹೈಸ್ಕೂಲ್ ಪೆರಡಾಲದ ಎಸ್ ಪಿ ಸಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ರೆಡ್ ಕ್ರಾಸ್ ವಿದ್ಯಾರ್ಥಿಗಳು ಸೇರಿ ಬದಿಯಡ್ಕ ಪೇಟೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನಾ ಆಂದೋಲನಾ ನಡೆಸಿದರು
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಅಧ್ಯಾಪಕರುಗಳ ಸಹಿತ ಇತರರು ಉಪಸ್ಥಿತರಿದ್ದರು  ವಿದ್ಯಾರ್ಥಿಗಳು ಬದಿಯಡ್ಕ ಪೇಟೆಗೆ ತೆರಳಿ ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ವ್ಯಾಪಾರಿಗಳಲ್ಲಿ ಅರಿವು ಮೂಡಿಸಿ ಶೇಖರಣೆಯಾಗಿದ್ದ ಪ್ಲಾಸ್ಟಿಕುಗಳನ್ನು ನಿರ್ಮೂಲನಗೊಳಿಸಿದರು