ಪ್ಲಾಸ್ಟಿಕ್ ನಿಷೇಧ ಕರಡು ನಿಯಮ ಅಂಗೀಕಾರ

ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ `ಸ್ವಚ್ಛ ನೀತಿ-2017′ ಕರಡು ನಿಯಮಕ್ಕೆ ಮಂಗಳವಾರ ನೇತ್ರಾವತಿ ಆಡಿಟೋರಿಯಂನಲ್ಲಿ ಇದೇ ಉದ್ದೇಶಕ್ಕೆ ಕರೆದಿದ್ದ ವಿಶೇಷ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಆರ್ ರವಿ, “ತ್ಯಾಜ್ಯ ಎಸೆಯುವುದನ್ನು ತಡೆಯಲು ಸೀಸಿ ಟೀವಿ ಕ್ಯಾಮರಾಗಳ ಅಳವಡಿಕೆ ಸೇರಿದಂತೆ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೇಕಾದ ಹಣಕಾಸು ಕುರಿತ ಮಾರ್ಗದರ್ಶನಗಳನ್ನು ನಿಯಮ ಒಳಗೊಂಡಿದೆ” ಎಂದು ಸಭೆಯಲ್ಲಿದ್ದ ಸದಸ್ಯರಿಗೆ ವಿವರಿಸಿದ್ದಾರೆ.

ಪ್ರತಿ ಪಂಚಾಯತ್ ಆವರಣದಲ್ಲಿ ರೂ 5 ಲಕ್ಷ ವೆಚ್ಚದಲ್ಲಿ ಎರಡು ಪರಿಸರ ಶೌಚಾಲಯಗಳನ್ನು ನಿರ್ಮಿಸಲಾ ಗುವುದು. ರೂ 57 ಲಕ್ಷ ವೆಚ್ಚದಲ್ಲಿ ಜೈವಿಕ ಅನಿಲ ಘಟಕಗಳನ್ನು ಜಿಲ್ಲೆಯ 133 ಹಾಸ್ಟೆಲುಗಳಲ್ಲಿ ನಿರ್ಮಿಸಲಾಗುವುದು ಎಂದು ರವಿ ತಿಳಿಸಿದ್ದಾರೆ.

ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಕಕ್ಷರಾದ ಆಶಾ ತಿಮ್ಮಪ್ಪ, ಶಾಹುಲ್ ಹಮೀದ್ ಮತ್ತು ಸರ್ವೋತ್ತಮ ಗೌಡ ಉಪಸ್ಥಿತರಿದ್ದರು.