ಮನಪಾ ವಿರುದ್ಧ ಗ್ರಾಹಕರ ವೇದಿಕೆಗೆ ಮೊರೆ

ಸಾಂದರ್ಭಿಕ ಚಿತ್ರ

ತೆರೆದ ಬಾವಿ ನೀರು ರಸಾತಳಕ್ಕೆ

ಮಂಗಳೂರು : ಮನಪಾ ಇತ್ತೀಚೆಗೆ ತಮ್ಮ ಮನೆ ಸಮೀಪದ ತೆರೆದ ಬಾವಿಯ ಸಮೀಪದಲ್ಲೇ ಎರಡು ಕೊಳವೆ ಬಾವಿಗಳನ್ನು ಕೊರೆಸಿರುವುದರಿಂದ ತೆರೆದ ಬಾವಿಯ ನೀರು ತಳ ತಲುಪಿದೆ ಎಂದು ಅಶೋಕನಗರ ನಿವಾಸಿ ಪರಿಸರ ಕಾರ್ಯಕರ್ತ ಶಶಿಧರ ಶೆಟ್ಟಿ ಆರೋಪಿಸಿದ್ದು, ಮನಪಾ ವಿರುದ್ಧ ಗ್ರಾಹಕರ ವೇದಿಕೆಯ ಮೊರೆ ಹೋಗಲು ನಿರ್ಧರಿಸಿದ್ದಾರೆ.

2013ರಲ್ಲಿ ತೋಡಿದ ಈ ಬಾವಿ 70 ಅಡಿ ಆಳವಿದ್ದು, ಮೇ ಅಂತ್ಯದವರೆಗೆ 20 ಅಡಿ ನೀರು ಇರುತ್ತಿತ್ತು. ಆದರೆ, ಈ ಬಾರಿ ನೀರಿನ ಮಟ್ಟ 4-5 ಅಡಿಗೆ ಇಳಿದಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಬಾವಿ ನೀರನ್ನು ನೆರೆಹೊರೆಯ ಸುಮಾರು 20 ಕುಟುಂಬಗಳಿಗೆ, ಶಾಲಾ ಮಕ್ಕಳಿಗೆ ಮತ್ತು ರಿಕ್ಷಾಚಾಲಕರಿಗೆ ಉಚಿತವಾಗಿ ಪೂರೈಸುತ್ತಿದ್ದರು. ಮನಪಾ ಕೊರೆಸಿರುವ ಕೊಳವೆ ಬಾವಿಗಳು ತೆರೆದ ಬಾವಿಯಿಂದ ಕ್ರಮವಾಗಿ 120 ಮತ್ತು 150 ಮೀಟರ್ ಕೆಳಗೆ ಇವೆ.  ಒಂದು ಬಾರಿ ಬಾವಿಯಿಂದ ನೀರು ಪಂಪ್ ಮಾಡಿದರೆ ಮತ್ತೆ ತುಂಬಲು ಮೂರು ನಾಲ್ಕು ದಿನಗಳನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಶೆಟ್ಟಿಯವರ ಬಾವಿ ನೀರು ಇಳಿಯಲು ಈ ಬೋರ್ವೆಲ್‍ಗಳೇ ಕಾರಣ ಎಂದು ಅವರು ಹೇಳಿದ್ದು, ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಮೊರೆ ಹೋಗಲು ನಿರ್ಧರಿಸಿದ್ದಾರೆ.