ನಾಟೆಕಲ್ ಅಂಗಡಿ, ಮಸೀದಿಗೆ ಹಾನಿ : ಕಮಿಷನರಗೆ ದೂರು

ಸಾಂದರ್ಭಿಕ ಚಿತ್ರ

ಮಂಗಳೂರು : ನಾಟೆಕಲಿನಲ್ಲಿ ಮಸೀದಿ, ಅಂಗಡಿಗಳಲ್ಲಿ ದಾಂದಲೆ ನಡೆಸಿ ಸೊತ್ತು ಹಾನಿ ಮಾಡಿ ಗಲಭೆಗೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಹಿಂದಿರುವ ಶಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಾಟೆಕಲ್ ವರ್ತಕರ ಸಂಘ ಮಂಗಳೂರು ಪೆÇಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.

ಜನವರಿ 7ರಂದು ಮಸೀದಿಯ ಪೀಠೋಪಕರಣಗಳನ್ನು ಹಾನಿಗೈದು ಪರಿಸರದಲ್ಲಿರುವ ಮೂರು ಅಂಗಡಿಗಳ ಸೊತ್ತುಗಳಿಗೂ ಹಾನಿ ನಡೆಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದರೂ, ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಇವರ ಹಿಂದಿರುವ ಶಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.

 

LEAVE A REPLY