ಆಡಿಯೊ, ವಿಡಿಯೊ ಹಾಡುಗಳನ್ನು ನಕಲಿ ಮಾಡುತ್ತಿದ್ದ ಮೊಬೈಲ್ ಶಾಪ್ ವಿರುದ್ಧ ಪೊಲೀಸ್ ದೂರು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮಂಗಳೂರಿನ ಸೂಪರ್ ಕ್ಯಾಸೆಟ್ ಸಂಸ್ಥೆಯ ಆಡಿಯೊ ಹಾಗೂ ವಿಡಿಯೊ ಹಾಡುಗಳನ್ನು ಪರವಾನಿಗೆ ಇಲ್ಲದೆ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಹಾಕಿ ಕೊಡುತ್ತಿದ್ದ 2 ಮೊಬೈಲ್ ಅಂಗಡಿಗಳ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಸನ್ ಕಮ್ಯುನಿಕೇಶನ್ ಹಾಗೂ ಸಾಯಿರಾಂ ಮೊಬೈಲ್ ಅಂಗಡಿಗಳಲ್ಲಿ ಇಂತಹ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸೂಪರ್ ಕ್ಯಾಸೆಟ್ ಸಂಸ್ಥೆಯ ಅಧಿಕಾರಿಯಾದ ಮುಖೆಶ್ಚಂದ್ರ ಭಟ್ ಈ 2 ಅಂಗಡಿಗಳಿಗೆ ಸಂಸ್ಥೆಯ ಇಬ್ಬರನ್ನು ಗ್ರಾಹಕರ ಸೋಗಿನಲ್ಲಿ ಕಳುಹಿಸಿ ಸಂಸ್ಥೆಯ ಸ್ವಾಮ್ಯಕ್ಕೆ ಒಳಪಟ್ಟ ಹಿರೋ, ಭಜರಂಗಿ ಭಾಯಿಜಾನ್ ಹಾಗೂ ಭಾಗಿ  ಎಂಬ ಹೆಸರಿನ ಹಿಂದಿ ಚಲನಚಿತ್ರದ ಹಾಡುಗಳನ್ನು ಹಾಕಿಕೊಡುವಂತೆ ಕಳುಹಿಸಿದ್ದರು. ಈ ಎರಡೂ ಅಂಗಡಿಗಳಲ್ಲಿ ಚಲನಚಿತ್ರದ ಆಡಿಯೊ ಹಾಡುಗಳನ್ನು ಹಾಕಿಕೊಟ್ಟಿದ್ದರು. ಸೂಪರ್ ಕ್ಯಾಸೆಟ್ ಸಂಸ್ಥೆಯ ಸ್ವಾಮ್ಯದ ಹಕ್ಕನ್ನು ನಕಲಿ ಮಾಡಿದ ಎರಡೂ ಅಂಗಡಿಗಳ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.