ಮೋದಿ ತಾಯಿಯ ನಿಂದಿಸಿದ ಗುಜರಾತದ ಜಿಗ್ನೇಶ್ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು

ಪುತ್ತೂರು : ಪ್ರಧಾನಿ ನರೇಂದ್ರ ಮೋದಿ ಮತ್ತವರ ತಾಯಿಯ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಗುಜರಾತದ ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ವಿರುದ್ಧ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆದ `ನಾನು ಗೌರಿ’ ಸಮಾವೇಶದಲ್ಲಿ ಮಾತನಾಡಿದ ಜಿಗ್ನೇಶ್ “ಮೋದಿಯಂತಹ ಕೆಟ್ಟ ಮನಸ್ಸಿನ  ಮಗನಿಗೆ ಏಕೆ ಜನ್ಮ ನೀಡಿದ್ದೀರೆಂದು

ಮೋದಿ ತಾಯಿಯ ನಿಂದಿಸಿದ ಮೋದಿ ತಾಯಿಯನ್ನು ಪ್ರಶ್ನಿಸಬೇಕು” ಹಾಗೂ ಗೌರಿ ಹತ್ಯೆಗೆ ಪ್ರಧಾನಿ ಕಾರಣ ಎಂಬರ್ಥದ ಮಾತುಗಳನ್ನು ಆಡಿದ್ದಾರೆಂಬ ಆರೋಪ ಜಿಗ್ನೇಶ್ ಮೇಲಿದ್ದು ಅವರನ್ನು ಬಂಧಿಸಬೇಕು ಎಂಬ ಬೇಡಿಕೆಯನ್ನೂ ಅರುಣ್ ಕುಮಾರ್ ಮುಂದಿಟ್ಟಿದ್ದಾರೆ.