ಹೆಚ್ಚಿನ ಬಿಲ್ ವಿಧಿಸಿದ ಪಟಾಕಿ ಮಾರಾಟಗಾರನ ವಿರುದ್ಧ ದೂರು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಪಟಾಕಿ ಖರೀದಿಯ ವೇಳೆ ಅಂಗಡಿಕಾರ ಗ್ರಾಹಕರಿಗೆ ವಂಚಿಸಲು ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ.

ಪೇಟೆಯಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಪಟಾಕಿ ಅಂಗಡಿಯೊಂದರಲ್ಲಿ ದೂರುದಾರರು ಗ್ರಾಹಕನಾಗಿ ಹೋಗಿರುವ ಸಂದರ್ಭ ಪಟಾಕಿಯ ಬೆಲೆಗಿಂತ ಅಧಿಕ ಬೆಲೆಯನ್ನು ಅಂತಿಮ ಬಿಲ್ ಮಾಡುವಾಗ ನಮೂದಿಸಿರುವುದನ್ನು ಗ್ರಾಹಕ ಆಕ್ಷೇಪಿಸಿದರೂ ಅಂಗಡಿ ಮಾಲಕ ಸಮರ್ಥಿಸಿದ ಹಿನ್ನೆಲೆಯಲ್ಲಿ ಕಡಿಮೆ ಬೆಲೆ ತಿಳಿಸಿ ಬಳಿಕ ಹೆಚ್ಚಿನ ದರ ವಸೂಲು ಮಾಡುವ ಮೂಲಕ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಟಾಕಿ ಮಾರಾಟಗಾರರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು, ಗ್ರಾಹಕ ಹಿತ ರಕ್ಷಣಾ ಕಾಯಿದೆಯನುಸಾರ ಕಾನೂನುಬದ್ಧ ವ್ಯಾಪಾರ ನಡೆಸಬೇಕೆಂದೂ, ಎಲ್ಲಾ ಗ್ರಾಹಕರಿಗೂ ಅಧಿಕೃತ ಬಿಲ್ ನೀಡಿಯೇ ವ್ಯವಹರಿಸಬೇಕೆಂದೂ ನಿರ್ದೇಶನ ನೀಡಿದರು.