ಯಡ್ಡಿ ವಿರುದ್ಧ ಪೊಲೀಸ್ ದೂರು

ಬೆಂಗಳೂರು : “ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಿದರೆ  ಕರ್ನಾಟಕವೇ ಹೊತ್ತಿ ಉರಿಯುವುದು” ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ  ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎನ್ ಹನುಮೇಗೌಡ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದು  ಈ ದೂರಿನ ಪ್ರತಿಯೊಂದನ್ನು ಮುಖ್ಯ ಕಾರ್ಯದರ್ಶಿಗೂ ಸಲ್ಲಿಸಿದ್ದಾರೆ. ಯಡ್ಡಿಯೂರಪ್ಪ ಅವರ ಹೇಳಿಕೆ ರಾಜ್ಯ ಸರಕಾರವನ್ನು ಬೆದರಿಸಿದಂತೆ, ಅವರ ವಿರುದ್ಧ ಸೆಕ್ಷನ್ 153 ಹಾಗೂ ಸೆಕ್ಷನ್ 436 ಅನ್ವಯ ಪ್ರಕರಣ ದಾಖಲಿಸಬೇಕೆಂದು ದೂರುದಾರರು ವಿನಂತಿಸಿದ್ದಾರೆ. ಈ ಸಂಬಂಧ ಪೊಲೀಸರು ಇನ್ನಷ್ಟೇ ಎಫೈಆರ್ ದಾಖಲಿಸಬೇಕಿದೆ.