ಪಿಲಿಕುಳ ನಿಸರ್ಗಧಾಮದಲ್ಲಿ ದೋಣಿ ವಿಹಾರ ಆರಂಭ

ಮಂಗಳೂರು : ಪಿಲಿಕುಳ ನಿಸರ್ಗಧಾಮದಲ್ಲಿ ದೋಣಿ ವಿಹಾರ ಮತ್ತೆ ಎಂದಿನಂತೆ ಪುನರಾಂಭಗೊಂಡಿದೆ. ಮಳೆಗಾಲ ಪ್ರಯುಕ್ತ ಎರಡು ತಿಂಗಳ ಕಾಲ ನಿಷೇಧವಿದ್ದು, ಇದೀಗ ಆರಂಭವಾಗಿದೆ. ಪಿಲಿಕುಳ ನಿಸರ್ಗಧಾಮಕ್ಕೆ ನಿತ್ಯ ಅನೇಕ ಕಡೆಯಿಂದ ಪ್ರವಾಸಿಗರು ಬರುತ್ತಿದ್ದು, ಪ್ರಾಣಿ-ಪಕ್ಷಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಿದ್ದರು. ಇದೀಗ ದೋಣಿ ವಿಹಾರವೂ ಆರಂಭವಾಗಿದ್ದು, ಪ್ರವಾಸಿಗರ ಖುಷಿ ಇಮ್ಮಡಿಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.