ಪಿಲಿಬೈಲ್ ಯುಮುನಕ್ಕ ಚಿತ್ರದ ಪೈರಸಿ ಬಹಿರಂಗ

ಮಂಗಳೂರು : ತುಳು ನಾಡಿನ್ಯಾದಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ `ಪಿಲಿಬೈಲ್ ಯುಮುನಕ್ಕ’ ಚಿತ್ರದ ಪೈರಸಿ ಪ್ರಕರಣ ಬೆಳಕಿಗೆ ಬಂದಿದೆ. ಥಿಯೇಟರ್ನಲ್ಲಿ ದೃಶ್ಯ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವವರ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಮಂಗಳೂರು ತುಳು ಕಾಮಿಡಿ ವಿಡಿಯೋಸ್ ಎನ್ನುವ ಫೇಸ್ಬುಕ್ ಪೇಜಲ್ಲಿ ಸಿನಿಮಾದ ಹಾಸ್ಯ ದೃಶ್ಯಗಳನ್ನು ಒಳಗೊಂಡ ಸುಮಾರು 3 ನಿಮಿಷಗಳ ತುಣುಕಗಳನ್ನು ಹರಿಯಬಿಡಲಾಗಿದೆ. ಚಿತ್ರ ತಂಡವು ಮಂಗಳೂರು ಬಂದರು ರಾಣೆಯಲ್ಲಿ ದೂರು ದಾಖಲಿಸಿದೆ.

ಬೆಳ್ತಂಡಿಯಲ್ಲೂ ಇಂತಹ ನಡೆದ ಬಗ್ಗೆ ಮಾಹಿತಿ ಲಭಿಸಿದೆ. ಭಾನುವಾರ ಬೆಳ್ತಂಗಡಿಯ ಭಾರತ್ ಥಿಯೇಟರಿನಲ್ಲಿ ವ್ಯಕ್ತಿಯೋರ್ವ ತನ್ನ ಖಾಸಗಿ ಕ್ಯಾಮರದಲ್ಲಿ ಸೆರೆ ಹಿಡಿಯುವ ಪ್ರಯತ್ನದಲ್ಲಿದ್ದಾಗ ಪ್ರೇಕ್ಷಕರೇ ಹಿಡಿದು ಥಳಿಸಿದ ಘಟನೆ ನಡೆದಿದೆ. ಆ ವ್ಯಕ್ತಿ ಕ್ಷಮೆ ಕಳಿದ ಹಿನ್ನೆಲೆಯಲ್ಲಿ ದೂರು ದಾಖಲಿಸಲಿಲ್ಲ ಎಂದು ಚಿತ್ರ ತಂಡ ತಿಳಿಸಿದೆ.