ಶುಕ್ರವಾರ `ಪಿಲಿಬೈಲ್ ಯಮುನಕ್ಕ’ ಬಿಡುಗಡೆ

ಮಂಗಳೂರು : ಡಿಸೆಂಬರ್ 9ರಂದು ಬಿಡುಗಡೆಗೆ ಸಿದ್ದಗೊಂಡಿದೆ ತುಳು ಚಲನಚಿತ್ರ `ಪಿಲಿಬೈಲ್ ಯಮುನಕ್ಕ’. ಇದು ಲಕುಮಿ ಸಿನೆ ಕ್ರಿಯೇಶನ್ಸ್ ಬ್ಯಾನರಿನಡಿ ಸಿದ್ಧಗೊಂಡಿರುವ ಚಿತ್ರವಾಗಿದ್ದು, ಇದರಲ್ಲಿ ಮನುಷ್ಯನ ಜೀವನ ಮತ್ತು ಆಸೆಗಳು ವ್ಯಕ್ತವಾಗಿವೆ.

ತುಳುವಿನಲ್ಲಿ ಈವರೆಗೆ ಬಹುತೇಕ ಹಾಸ್ಯಮಯ ಚಿತ್ರಗಳು ಬಂದಿದ್ದು, ಈ ಚಿತ್ರ ಮಾತ್ರ ಇದಕ್ಕೆ ಭಿನ್ನವಾಗಿದೆ. ಹಿಂದೆ ಈ ಬ್ಯಾನರಿನಡಿ `ಎಕ್ಕ ಸಕ್ಕ’ ಚಿತ್ರ ಬಿಡುಗಡೆಗೊಂಡಿತ್ತು. ಪಿಲಿಬೈಲ್ ಯಮುನಕ್ಕದಲ್ಲಿ ಪುಟ್ಟ ಗೌರಿ ಧಾರಾವಾಹಿಯ ಚಂದ್ರಕಲಾ ಮೋಹನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ನಿರ್ದೇಶಕ ಸೂರಜ್ ಶೆಟ್ಟಿ ತಿಳಿಸಿದರು. ಚಿತ್ರವು ಹಿಂಸೆ ಮತ್ತು ಅಶ್ಲೀಲ ಸಂಭಾಷಣೆಯಿಂದ ಹೊರತಾಗಿದ್ದು, ಕುಟುಂಬ ಸಹಿತ ನೋಡಬಹುದಾಗಿದೆ. ಇದು ದ ಕ ಮತ್ತು ಉಡುಪಿ ಜಿಲ್ಲೆಯ ಕೆಲವು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ  ಕಿಶೋರ್ ಡಿ ಶೆಟ್ಟಿ ತಿಳಿಸಿದರು.