ಕಳಪೆ ಕಥಾಹಂದರದ ಪಿಲಿಬೈಲ್ ಯಮುನಕ್ಕ

ಭಾರೀ ಪ್ರಚಾರದೊಂದಿಗೆ ಬಿಡುಗಡೆಗೊಂಡ ತುಳು ಚಿತ್ರ `ಪಿಲಿಬೈಲ್ ಯಮುನಕ್ಕ’ ನೋಡಿ ತುಂಬಾ ಬೇಸರವಾಯಿತು. ಈ ಚಿತ್ರ ಕುಟುಂಬ ಸಮೇತ ನೋಡುವ ಹಾಗಿಲ್ಲ. ಎಕ್ಕಸಕ್ಕ ದಂತಹ ಸೂಪರ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕರಿಂದ ಇಂಥ ಚಿತ್ರ ನಿರೀಕ್ಷಿಸಿರಲಿಲ್ಲ. `ಯಮುನಕ್ಕ’ದಲ್ಲಿ ಕಥೆಯೇ ಇಲ್ಲ. ಉತ್ತಮ ಕಥೆ ಇರಬಹುದು ಎಂದು ಕಾದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. `ಯಮುನಕ್ಕ’ ಪಾತ್ರ ತೀರಾ ಪೇಲವವಾಗಿದೆ. ಅವರ ಪಾತ್ರ  ಸಂಭಾಷಣೆಗೆ ಫೋರ್ಸ್ ಇಲ್ಲವೇ ಇಲ್ಲ.
ಚಿತ್ರ ನಿರ್ದೇಶಕರಿಗೆ ಕಾಶೀನಾಥರ ಛಾಯೆ ತೀವ್ರವಾಗಿ ಕಾಡಿದಂತೆ ಕಂಡುಬರುತ್ತಿದೆ. ಹೀರೋ  ಮಡಿಕಲ್ ಶಾಪಿನಲ್ಲಿ ಕಾಂಡೋಮ್ ಕೇಳಲು ಹೋಗುವ ಸನ್ನಿವೇಶ ತೀರಾ ಅಸಹ್ಯ. ಮುಂದಿನ ಸಾಲಿನಲ್ಲಿದ್ದ ಹೆಣ್ಣು ಮಕ್ಕಳು ಈ ದೃಶ್ಯಕ್ಕೆ ತಲೆ ತಗ್ಗಿಸಿದ್ದರು. ಮಕ್ಕಳು ಕೂಡಾ ಅಪ್ಪನಲ್ಲಿ ಪ್ರಶ್ನೆ ಕೇಳುತ್ತಿದ್ದನ್ನು ನಾನೇ ಕಣ್ಣಾರೆ ನೋಡಿ ವೇದನೆಯಾಯ್ತು. ಇಲ್ಲಿ ಹಾಸ್ಯ ಹಾಸ್ಪಾಸ್ಪದವಾಗಿದೆ. ಚಿತ್ರದ ತುಂಬಾ ಕುಡಿತದ ದೃಶ್ಯವೇ ತುಂಬಿ ಹೋಗಿದೆ. ಸಾಲದ್ದಕ್ಕೆ ಕುಡಿತದ ಹಾಡು ಕೂಡಾ ಇದೆ. ನೈಜತೆ ಇಲ್ಲದ ದೃಶ್ಯಗಳಿಂದ ಚಿತ್ರ ನೀರಸವಾಗಿದೆ. ವೇಶ್ಯೆಯನ್ನು ದುಡ್ಡಿಗಾಗಿ ಬರಲು ಹೇಳುವ ದೃಶ್ಯ, ವೇಷ ಮರೆಸಿ ದಿನ ಕಳೆಯುವ ದೃಶ್ಯ, ಅಸಂಬದ್ಧ `ಡಾಲರ್’ ದೃಶ್ಯಗಳು ಚಿತ್ರವನ್ನು ಕಳಪೆ ಸಾಲಿನಲ್ಲಿ ನಿಲ್ಲಿಸಲು ಸಹಕಾರಿಯಾಗಿದೆ. ಡ್ಯಾನ್ಸ್ ಬಿಟ್ಟರೆ ಹೀರೋ ಸಾಧನೆ ಏನೂ ಇಲ್ಲ. ಬೆಳೆಯುತ್ತಿರುವ ತುಳು ಚಿತ್ರರಂಗಕ್ಕೆ ಇಂಥ ಚಿತ್ರಗಳ ಕೊಡುಗೆ ನೀಡದಿರಿ.

  • ಉದ್ಯಾವರ ಮನೋಹರ ಎಚ್
    ಉಡುಪಿ ಜಿಲ್ಲೆ