ವಿದೇಶಗಳಲ್ಲಿ ದೈಹಿಕ ತಪಾಸಣೆ ತಪ್ಪಲ್ಲ

ವಿದೇಶಗಳಲ್ಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಜನರನ್ನು ವಿವಸ್ತ್ರಗೊಳಿಸಿ ಪರೀಕ್ಷೆಗೆ ಒಳಪಡಿಸುವುದು ಜಾಸ್ತಿಯಾಗಿದೆ. ಒಂದು ರೀತಿಯಲ್ಲಿ ಇದು ಸಹಜ ಕೂಡಾ. ಇದಕ್ಕೆ ಜನರೇ ಕಾರಣ. ಮಾದಕ ವಸ್ತುಗಳನ್ನು, ಸ್ಫೋಟಕ ಸಾಧನಗಳನ್ನು ತರಕಾರಿ, ಹಣ್ಣು, ಸಾಬೂನು ಎಲ್ಲೆಂದರಲ್ಲಿ ತುರುಕಿ ತರುವುದು ಕೇಳಿದ್ದೇವೆ. ಅದೇ ರೀತಿ ಜನರು ತಮ್ಮ ಶರೀರದ ವಿವಿಧ ಭಾಗಗಳಲ್ಲಿ ಕೂಡ ಅವನ್ನು ಅಡಗಿಸಿ ತರುವುದನ್ನು ಹಾಗೂ ಅಧಿಕಾರಿಗಳಿಗೆ ಸಿಕ್ಕಿ ಬೀಳುವುದನ್ನು ಕೇಳುತ್ತಿರುತ್ತೇವೆ. ಯಾವುದೇ ದೇಶ ತನ್ನ ರಕ್ಷಣೆಗಾಗಿ ಅವನ್ನು ಪತ್ತೆ ಹಚ್ಚಲೆಂದು ಈ ರೀತಿ ತಪಾಸಣೆ ಮಾಡುವುದರಲ್ಲಿ ತಪ್ಪಿಲ್ಲ

  • ಪುರಂದರ ಬಲ್ಯಾಯ  ಪುದು