ಛಾಯಾಗ್ರಾಹಕ ಸಮಾಜದ ಆಸ್ತಿ : ಮ್ಯಾಥ್ಯೂ

ಕಾಸರಗೋಡು : “ಸಾರ್ವಜನಿಕ ರಂಗದಲ್ಲಿ ಇತರರ ಮುಗ್ಧ ನಗುವನ್ನು ಸುಂದರವಾಗಿ ಸೆರೆಹಿಡಿಯುವ ಮೂಲಕ ತನ್ನ ಅಂತರಂಗದ ನೋವನ್ನು ಮರೆಮಾಚಿ ಇತರರನ್ನು ನಗಿಸುವ ಛಾಯಾಗ್ರಾಹಕ ಸಮಾಜದ ಆಸ್ತಿ” ಎಂದು ಆದೂರು ಸಿಐ ಮ್ಯಾಥ್ಯೂ ಎಂ ಎ ಹೇಳಿದರು.

ಅವರು ಮಂಗಳವಾರ ಮುಳ್ಳೇರಿಯ ವ್ಯಾಪಾರ ಭವನದಲ್ಲಿ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ವಲಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

“ಒಂದು ಚಿತ್ರವನ್ನು ಯಾರೂ ಸೆರೆಹಿಡಿಯಬಹುದು. ಆದರೆ ಒಬ್ಬ ವೃತ್ತಿಪರ ಛಾಯಾಗ್ರಾಹಕ ತೆಗೆದ ಚಿತ್ರದಲ್ಲಿ ಆತನ ಕೌಶಲ್ಯತೆ, ಸಮಯಪ್ರಜ್ಞೆ, ನೈಪುಣ್ಯತೆ ಹಾಗೂ ಗುಣಮಟ್ಟದಿಂದ ಕೂಡಿರುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ನಿಮಗಿದೆ. ಜಾತಿ-ಮತ ಭೇದವಿಲ್ಲದೇ ಕಳೆದ 33 ವರ್ಷದಿಂದ ಉತ್ತಮ ಸಾಮಾಜಿಕ ಹಾಗೂ ಪರಸ್ಪರ ಸಹಾಯ ಸಹಕಾರದೊಂದಿಗೆ ಉತ್ತಮ ಕಾರ್ಯಗಳಿಂದ ಸಮಾಜದಲ್ಲಿ ಗುರುತಿಸಲ್ಪಟ್ಟ ಸಂಘಟನೆಯಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಸಂಘಟನೆಯು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ನಡೆಸುವಂತಾಗಲಿ” ಎಂದು ಹಾರೈಸಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪೆನ್ಸಿಲ್ ಡ್ರಾಯಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

 

 

LEAVE A REPLY