ಶಿಲ್ಪಾ ಶೆಟ್ಟಿ ಫೆÇೀಟೋ ತೆಗೆದಿದ್ದಕ್ಕೆ ಒದೆ ತಿಂದ ಫೊಟೋಗ್ರಾಫರ್ಸ್

ಶಿಲ್ಪಾ ಶೆಟ್ಟಿ ಕುಂದ್ರಾ ಮೊನ್ನೆ ತನ್ನ ಪತಿ ರಾಜ್ ಕುಂದ್ರಾ ಜೊತೆ ಮುಂಬೈನ ಪ್ರಖ್ಯಾತ ರೆಸ್ಟಾರೆಂಟ್ `ಬ್ಯಾಸ್ಟಿಯನ್’ನಲ್ಲಿ ಡಿನ್ನರಿಗೆ ಹೋಗಿದ್ದಳು. ಡಿನ್ನರ್ ಬಳಿಕ ಹೊರಬಂದ ಕುಂದ್ರಾ ದಂಪತಿ ಫೊಟೋ ತೆಗೆಯಲು ಫೊಟೋಗ್ರಾಫರುಗಳು ಮುಗಿಬಿದ್ದಿದ್ದರು. ಶಿಲ್ಪಾ ಕೂಡಾ ತನ್ನ ಪತಿಯೊಂದಿಗೆ ಸ್ಟೈಲಾಗಿಯೇ ಫೋಟೋಗೆ ಫೋಸ್ ನೀಡಿದ್ದಳು. ಶಿಲ್ಪಾ-ರಾಜ್ ಕಾರು ಹತ್ತಿದ ಬಳಿಕವೂ ಅವರ ಫೊಟೋ ತೆಗೆಯಲು ಅವರು ಮುಂದಾಗಿದ್ದರು. ಅಷ್ಟು ಹೊತ್ತಿಗೆ ಅಲ್ಲಿರುವ ಹೊಟೇಲಿನ ಬೌನ್ಸರುಗಳು ಫೊಟೋಗ್ರಾಫರುಗಳನ್ನು ತಡೆಯಲು ಹೋಗಿದ್ದಾರೆ. ಆಗ ಅವರ ನಡುವೆ ಮಾತಿನ ಚಕಮುಕಿ ನಡೆದಿದೆ. ಅಷ್ಟೇ ಅಲ್ಲ ಸಿಟ್ಟುಗೊಂಡ ಬೌನ್ಸರುಗಳು ಫೆÇೀಟೋ ಜರ್ನಲಿಸ್ಟ್‍ಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ದೃಶ್ಯ ಸಿಸಿಟೀವಿಯಲ್ಲಿ ರೆಕಾರ್ಡ್ ಆಗಿದೆ. ಪೆÇೀಲಿಸ್ ಠಾಣೆಯಲ್ಲಿ ಆ ಇಬ್ಬರು ಬೌನ್ಸರುಗಳ ವಿರುದ್ಧ ಕೇಸು ಕೂಡಾ ದಾಖಲಾಗಿದ್ದು ಅವರನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಶಿಲ್ಪಾ “ಫೊಟೋಗ್ರಫರುಗಳ ಮೇಲೆ ಈ ರೀತಿಯ ಹಲ್ಲೆ ಆಗಬಾರದಿತ್ತು. ಅವರು ತಮ್ಮ ಕೆಲಸಗಳನ್ನು ಮಾಡುತ್ತಾರೆ. ಒಂದು ಶಾಟ್ ತೆಗೆಯಲು ಗಂಟೆಗಟ್ಟಲೆ ಕಾಯುತ್ತಾರೆ. ಅವರ ಮೇಲೆ ಹಲ್ಲೆಯಾಗಿದ್ದು ನನಗೆ ತುಂಬಾ ದುಃಖವನ್ನುಂಟುಮಾಡಿದೆ” ಎಂದಿದ್ದಾಳೆ.