ದ್ವಿಚಕ್ರ ವಾಹನ ಸ್ಕಿಡ್ ಆಗಿ ಫೋಟೋಗ್ರಾಫರ್ ಮೃತ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ನಗರದ ಫೋಟೋಗ್ರಾಫರೊಬ್ಬರು ಸಾವನ್ನಪ್ಪಿದ್ದಾರೆ.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪುತ್ತೂರು ಎಲ್ ವಿ ಟಿ ದೇವಳ ಸಮೀಪದ ಹೋಂಡಾ ಶೋ ರೂಮ್ ಎದುರು ಭಾನುವಾರ ರಾತ್ರಿ ದುರಂತ ಸಂಭವಿಸಿದೆ. ಉಡುಪಿ ನಗರದ ಹೊರವಲಯದ ಸಂತೆಕಟ್ಟೆ ಸಮೀಪದ ಕಲ್ಯಾಣಪುರ ಮಹಾಲಿಂಗೇಶ್ವರ ದೇವಳ ಬಳಿಯ ನಿವಾಸಿ, ಉಡುಪಿ ನಗರದ ಫೋಟೋಗ್ರಾಫರ್ ಸುಂದರ ಶೇರಿಗಾರ್ (60) ಸಾವನ್ನಪ್ಪಿದ ದ್ವಿಚಕ್ರ ಸವಾರ.

ಸುಂದರ ಶೇರಿಗಾರ ದ್ವಿಚಕ್ರ ವಾಹನದಲ್ಲಿ ಮನೆ ಕಡೆಯಾದ ಕಲ್ಯಾಣಪುರ ಕಡೆಗೆ ಹೋಗುತ್ತಿದ್ದ ವೇಳೆ, ಶೋರೂಮ್ ಎದುರು ದ್ವಿಚಕ್ರ ವಾಹನ ಸ್ಕಿಡ್ ಆಗಿದೆ. ಪರಿಣಾಮ ಸವಾರ ಸುಂದರ ಶೇರಿಗಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.