ಬ್ಯಾಂಕ್ ಸಾಲಿನಲ್ಲಿ ಸ್ಥಾನ ಕಳೆದುಕೊಂಡ ವೃದ್ಧನ ಕಣ್ಣೀರ ಕೋಡಿಯ ಚಿತ್ರ ವೈರಲ್

ನವದೆಹಲಿ : ಕೇಂದ್ರ ಸರಕಾರ  500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದಂದಿನಿಂದ ಜನಸಾಮಾನ್ಯರ ಸಂಕಷ್ಟ ಹೇಳತೀರದಾಗಿದೆ. ಶ್ರೀಮಂತರು ಅದ್ಹೇಗೋ ಬ್ಯಾಂಕು ಹಾಗೂ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದರೂ ಜನಸಾಮಾನ್ಯರು ದಿನನಿತ್ಯ ಸರತಿ ನಿಲ್ಲುವಂತಾಗಿದೆ. ಇಂತಹ ಒಂದು ಉದ್ದ ಸರತಿಯಲ್ಲಿ ಗುರ್ಗಾಂವ್  ನಗರದÀ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನ್ಯೂ ಕಾಲನಿ ಶಾಖೆಯ  ಹೊರಗೆ ನಿಂತಿದ್ದ ವೃದ್ಧನೊಬ್ಬ ಸರತಿಯಲ್ಲಿ ತನ್ನ ಸ್ಥಾನ ಕಳೆದುಕೊಂಡು ಜೋರಾಗಿ ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆಯಲ್ಲದೆ ನೋಟು ರದ್ದತಿಯಿಂದ ಬಡವರ ಕಷ್ಟದ ದ್ಯೋತಕವಾಗಿದೆ. ಈ ಫೋಟೋವನ್ನು ಕ್ಲಿಕ್ಕಿಸಿದವರು ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಯ ಛಾಯಾಗ್ರಾಹಕ ಪರ್ವೀನ್ ಕುಮಾರ್.