ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಗೋಡೆ ಕುಸಿತ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಣಿಪಾಲ ಸಮೀಪದ ಪರ್ಕಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು, ಇದರ ಉಪಕೇಂದ್ರವಾದ ಹೆರ್ಗ ಪ್ರಾಥಮಿಕ ಆರೋಗ್ಯ ಕೇಂದ್ರವು ಪರ್ಕಳ ಮೀನು ಮಾರುಕಟ್ಟೆಯ ಬಳಿಯೇ ಇದ್ದು ಈ ಆರೋಗ್ಯ ಕೇಂದ್ರದ ಕಂಪೌಂಡ್ ವಾಲ್ (ಆವರಣ ಗೋಡೆ) ಸಂಪೂರ್ಣ ಕುಸಿದು ಅನೇಕ ವರ್ಷಗಳು ಉರುಳಿದೆ. ಇಲ್ಲಿನ ತನಕ ಯಾವ ಇಲಾಖಾಧಿಕಾರಿಗಳು ಇತ್ತ ಕಡೆ ಗಮನಿಸದೆ ದನ, ನಾಯಿ ಬೆಕ್ಕು ಬೇಲಿಯೊಳಗೆ ನುಗ್ಗುವಂತಾಗಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.