ಹಾಡಿ ಜಾಗದಲ್ಲಿದ್ದ ಗೂಡಂಗಡಿ ತೆರವು

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಇಲ್ಲಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೆರ್ತಾರದಲ್ಲಿ ಸರ್ಕಾರಿ ಹಾಡಿ ಜಾಗದಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿದ್ದ ಕಂಪೌಂಡ್ ಮತ್ತು ಗೂಡಂಗಡಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತೆರವುಗೊಳಿಸಿದರು.

ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮುಂಬರುವ ದಿನದಲ್ಲಿ ಸರ್ಕಾರಿ ಹಾಡಿ ಜಮೀನನ್ನು ಅತಿಕ್ರಮಣ ಮಾಡದಂತೆ ತಹಶೀಲ್ದಾರರು ನೋಟಿಸ್ ನೀಡಿದ್ದಾರೆ. ಇಲ್ಲಿನ ಹೆಬಳೆ ಹೆರ್ತಾರ ಮಜಿರೆಯ ಸರ್ವೆ ನಂ 92ರಲ್ಲಿನ ನಾರಾಯಣ ಮೋಗೇರ ಎನ್ನುವವರು ಸರ್ಕಾರಿ ಹಾಡಿ ಜಮೀನನ್ನು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿದ್ದರು.

LEAVE A REPLY