ಮಂಕಾಳ ವೈದ್ಯ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಕ್ರಿಮಿನಲ್ ಪ್ರಕರಣ

ಛಿಪೆಟ್ರೋಲಿಯಂ ಟ್ಯಾಂಕರ್ ದರೋಡೆ ವಿಚಾರಣೆ ಅಂತಿಮ ಹಂತಕ್ಕೆ

ಪ್ರೇಷಿತ ಪ್ರತಿನಿಧಿ ವರದಿ

ಕುಂದಾಪುರ : ಕುಂದಾಪುರದ ಹೊಸಂಗಡಿ ಸಮೀಪ 2009ರಲ್ಲಿ ನಡೆದಿದ್ದ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣವು ಭಟ್ಕಳ ಶಾಸಕ ಮಂಕಾಳ ವೈದ್ಯರ ರಾಜಕೀಯ ಭವಿಷ್ಯ ನಿರ್ಧರಿಸುವ ಸಾಧ್ಯತೆ ಇದೆ.

ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿ ಗೆದ್ದು ನಂತರ ಕಾಂಗ್ರೆಸ್ಸಿಗೆ ಪಕ್ಷಾಂತರ ಮಾಡಿದ ಹಾಲಿ ಶಾಸಕ ಮಂಕಾಳ ವೈದ್ಯ ಈ ಪ್ರಕರಣದಲ್ಲಿ ಎಂಟನೇ ಆರೋಪಿ.

ಕುಂದಾಪುರ ತಾಲೂಕಿನ ಶಂಕರನಾರಾಯಣ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನು ಅಂದಿನ ಕುಂದಾಪುರ ಇನ್ಸಪೆಕ್ಟರ್ ಚಂದ್ರಶೇಖರ್ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯು ಅಂತಿಮ ಹಂತ ತಲುಪಿದೆ. ಸೆಷನ್ಸ್ ನ್ಯಾಯಾಲಯದಲ್ಲಿ 2013ರಿಂದ ಈ ಪ್ರಕರಣ ವಿಚಾರಣೆಯಲ್ಲಿದೆ.

ಈ ಪ್ರಕರಣದಲ್ಲಿ ಪ್ರಶಾಂತ್ ಭಂಡಾರಿ, ಮಂಜುನಾಥ್, ಪ್ರಶಾಂತ್ ಪೂಜಾರಿ, ಸತೀಶ್ ಪೂಜಾರಿ, ಸತೀಶ್ ಶೆಟ್ಟಿ, ಶೇಖರ್ ಪೂಜಾರಿ, ಮೋಹನ್ ಪೂಜಾರಿ ಮತ್ತು ರಾಮ ಮೊಗೇರ ಇತರ ಆರೋಪಿಗಳಾಗಿದ್ದಾರೆ.

ಕುಂದಾಪುರದಿಂದ ಪೆಟ್ರೋಲಿಯಂ ಟ್ಯಾಂಕರ್ ಅಪಹರಿಸಿ ಅದರಲ್ಲಿದ್ದ ಇಂಧನವನ್ನು ಮುರ್ಡೇಶ್ವರದಲ್ಲಿ ಅಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತಿನ ಮಾಜಿ ಉಪಾಧ್ಯಕ್ಷ ಮಂಕಾಳ  ವೈದ್ಯಗೆ ಸೇರಿದ ಪೆಟ್ರೋಲ್ ಬಂಕಿಗೆ ಮಾರಾಟ ಮಾಡಲಾಗಿತ್ತು. ಅಂದಿನ ಉಡುಪಿ ಎಸ್ಪಿ ಮಧುಕರ ಪವಾರ ಅವರ ನಿರ್ದೇಶನದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕುಂದಾಪುರ ಮತ್ತು ಅಮಾಸೆಬೈಲು ಪೆÇಲೀಸರು ಮಂಕಾಳನ ಸಮೇತ ಎಲ್ಲ ಎಂಟು ಆರೋಪಿಗಳನ್ನು ಸೊತ್ತುಸಹಿತ ಬಂಧಿಸಿದ್ದರು. ಪೆÇಲೀಸರ ಕಾರ್ಯವನ್ನು ಮೆಚ್ಚಿ ಅಂದಿನ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಪುರಸ್ಕರಿಸಿದ್ದರು.

ಕುಂದಾಪುರ ಇನ್ಸಪೆಕ್ಟರ್ ಚಂದ್ರಶೇಖರ್ ಅವರಲ್ಲದೆ ಅಮಾಸೆಬೈಲು ಪೆÇಲೀಸ್ ಠಾಣೆ ಎಸ್ ಐ ರಂಗಸ್ವಾಮಿ, ಪೆÇ್ರಬೇಷನರಿ ಸಬ್ ಇನಸ್ಪೆಕ್ಟರ್ ನಾಗೇಗೌಡ ಮತ್ತು ಇತರ ಪೆÇಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ ತಂಡದಲ್ಲಿದ್ದರು.

 

 

LEAVE A REPLY