ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಅಗತ್ಯ

ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿತ್ತು. ನಂತರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಇಳಿಯುತ್ತಾ ಬಂದು ಲೀಟರ್ ಪೆಟ್ರೋಲಿಗೆ 50 ರೂಪಾಯಿ ಆಗಿತ್ತು  ಆದರೆ ಇದನ್ನೇ ಆದಾಯದ ಮೂಲವಾಗಿಸಿಕೊಂಡ ಮೋದಿ ಸರಕಾರ ದರ ಇಳಿದರೂ ಅದನ್ನು ಗ್ರಾಹಕರಿಗೆ ನೀಡದೆ ಅಬಕಾರಿ ಶುಲ್ಕ ಹೆಚ್ಚು ಮಾಡುವುದರ ಮೂಲಕ ತನ್ನ ಖಜಾನೆ ತುಂಬಿಸಿಕೊಂಡಿತು  ಇದರಿಂದಾಗಿ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆಯೆನ್ನಲಾಗಿದೆ
ಇಷ್ಟಾದರೂ ಮೋದಿ ಸರಕಾರ ಸುಲಿಗೆಯನ್ನು ನಿಲ್ಲಿಸದೇ ದಿನೇ ದಿನೇ ಪೆಟ್ರೋಲ್ ದರವನ್ನು ಏರಿಸುತ್ತಲೇ ಇದ್ದು, ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆಯಾಗಿದೆ  ಇಂತಹ ಸುಲಿಗೆಯನ್ನು ನೋಡಿದರೆ ನಾವು ಇನ್ನೂ ಪರಕೀಯರ ಆಡಳಿತದಲ್ಲಿಯೇ ಇದ್ದೇವೆಯೇನೋ ಎಂಬಂತೆ ಭಾಸವಾಗುತ್ತದೆ  ಹೊಸ ಹೊಸ ತೆರಿಗೆಗಳನ್ನು ಹಾಕುತ್ತಾ, ಪ್ರತಿವರ್ಷವೂ ಇದ್ದ ತೆರಿಗೆ ಏರಿಸುತ್ತಿದ್ದರೆ ಸಾಮಾನ್ಯ ಜನರು ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ  ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳ ದರವನ್ನು 15 ದಿನಗಳಿಗೊಮ್ಮೆ ಪರಿಷ್ಕರಣೆ ಮಾಡುವ ಕ್ರಮವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು  ಆರು ತಿಂಗಳಿಗೊಮ್ಮೆ ಅಥವಾ ವಾರ್ಷಿಕ ಬಜೆಟಿನಲ್ಲಿ ಮಾತ್ರ ಲಾಭ ನಷ್ಟವನ್ನು ಲೆಕ್ಕ ಹಾಕಿ ಬೆಲೆ ಏರಿಕೆ ಮಾಡುವ ಪದ್ಧತಿ ಜಾರಿಗೆ ಬರಬೇಕು  ಆಗ ಮಾತ್ರ ಹಣದುಬ್ಬರವನ್ನು ನಿಯಂತ್ರಣ ಮಾಡಲು ಸಾಧ್ಯ

  • ಅವಿನಾಶ್ ಎಂ  ಕಂಕನಾಡಿ ಮಂಗಳೂರು