ಭಾರತದೊಂದಿಗೆ ಸಾರ್ವಕಾಲಿಕ ಹಗೆತನ ಅನವಶ್ಯಕ : ಪಾಕ್

ನವದೆಹಲಿ : ಪರಸ್ಪರ ಎರಡು ರಾಷ್ಟ್ರಗಳ ನಡುವಿನ ಒಪ್ಪಂದಗಳು ಬಿಗಡಾಯಿಸಿರುವ ಮಧ್ಯೆಯೇ, ಭಾರತದೊಂದಿಗೆ ಸಾರ್ವಕಾಲಿಕ ಹಗೆತನ ಮುಂದುವರಿಸಲು ಇಷ್ಟಪಟ್ಟಿಲ್ಲ ಎಂದಿರುವ ಪಾಕಿಸ್ತಾನ, ನೆರೆ ರಾಷ್ಟ್ರದೊಂದಿಗೆ ಯಥಾಸ್ಥಿತಿ ಕಾಯದುಕೊಳ್ಳಲು ಅಥವಾ ಹೊಸ ಯುವ ಆರಂಭಿಸಲು ಕಾಲ ಮಿಂಚಿ ಹೋಗಿಲ್ಲ ಎಂದಿದೆ.

“ನಿರಂತರ ಮತ್ತು ವಿಘ್ನರಹಿತ” ದ್ವಿಪಕ್ಷೀಯ ಮಾತುಕತೆಯೊಂದು ಮುಂದುವರಿಯಬೇಕೆಂದಿರುವ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್, ಎರಡು ರಾಷ್ಟ್ರಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಮತ್ತು ಸಹಕಾರ ಸಂಬಂಧ ನೆಲೆಗೊಳಿಸಲು ಪ್ರಯತ್ನಿಸುವ ಅಗತ್ಯವಿದೆ ಎಂದರು.