ಪೆರ್ಡೂರು ಸೇತುವೆ ಅಪಾಯದ ಭೀತಿಯಲ್ಲಿ

ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಉಡುಪಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಪೆರ್ಡೂರು ಪುತ್ತಿಗೆ ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೇತುವೆ ಅಡಿಪಾಯಕ್ಕೆ ಹಾಕಿದ ಕಾಂಕ್ರೀಟ್ ಜೆಲ್ಲಿಯ ಬೆಡ್ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದೆ
ಈ ಸೇತುವೆ ಮೇಲೆ ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತಿದೆ ಸೇತುವೆ ತಳಮಟ್ಟ ಅಡಿಪಾಯಕ್ಕೆ ಹಾಕಿದ ಸಿಮೆಂಟ್ ಬೆಡ್ ಸುಮಾರು ಎರಡು ಅಡಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದೆ ಅದರಂತೆ ಮೇಲ್ಭಾಗದ ಮಧ್ಯದಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು  ಸತತ ಭಾರೀ ಭಾರ ಹೊತ್ತ ಲಾರಿಗಳು ಈ ಸೇತುವೆ ಮೇಲೆ ಓಡಾಡಿದರೆ ಸೇತುವೆ ಮತ್ತಷ್ಟು ಅಪಾಯಕಾರಿ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಈ ಸೇತುವೆ ಪರಿಸ್ಥಿತಿಯನ್ನು ಅವಲೋಕಿಸುವರೇ

  • ಚಂದ್ರ ಶೇರ್‍ಗಾರ್  ಪೆರ್ಡೂರು