ಸೈಕಲ್ ರ್ಯಾಲಿಯಲ್ಲಿ 10ರಿಂದ 87 ವರ್ಷದವರ ಸವಾರಿ

ಮಂಗಳೂರು : ಸ್ವಸ್ತಿ ಆರೆಕ್ಸಲೈಫ್ ಟ್ರಸ್ಟ್ ಮತ್ತು ಹೆಕ್ರ್ಯುಲಸ್ ಬಿ ಎಸ್ ಎ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸೈಕಲ್ ರ್ಯಾಲಿಯಲ್ಲಿ 10ರಿಂದ 87 ವಯಸ್ಸಿನವರೆಗಿನ ಸೈಕಲ್ ಸವಾರರು ಭಾಗವಹಿಸಿದ್ದರು.

ರ್ಯಾಲಿಗೆ ನಗರದ ಲೇಡಿಹಿಲ್ಲಿನಲ್ಲಿ ಧ್ವಜ ಹಾರಿಸಿ ಚಾಲನೆ ನೀಡಲಾಯಿತು. ರ್ಯಾಲಿಯು ಚಿಲಿಂಬಿ, ಕೊಟ್ಟಾರ, ಕೋಡಿಕಲ್, ಕೂಳೂರು, ಪೇಜಾವರ, ಉರ್ವಸ್ಟೋರು, ಅಶೋಕನಗರ, ಸುಲ್ತಾನ್ ಬತ್ತೇರಿ ಮುಖಾಂತರ ಸಾಗಿ ಅಮೃತ ವಿದ್ಯಾಲಯದಲ್ಲಿ ಸಮಾಪನಗೊಂಡಿತು.

ಕೆಲವು ಸವಾರರು ಪೇಜಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಗುರುಪುರ ನದಿ ಎದುರಿನ ರಸ್ತೆಯಲ್ಲಿ ಚಲಿಸಿದರು. ಅಂದಾಜು ಸುಮಾರು 22 ಕಿ ಮೀ ಅಂತರವನ್ನು ಕ್ರಮಿಸಿದ್ದಾರೆ.

ಸುಮಾರು 12 ಸೈಕಲ್ಲುಗಳು ಮತ್ತು ಒಂದು ಅಮೆಜಾನ್ ಕಿಂಡಲ್ ಬಹುಮಾನಕ್ಕೆ ಇಡಲಾಗಿತ್ತು.

ಸಮಾಜ ಸೇವಕ ಎಸ್ ರಾಮಚಂದ್ರ ಭಂಡಾರಿ, ಕ್ರೀಡಾಪಟು ಕೆ ಸದಾನಂದ ಪ್ರಭು, ಟ್ರಾಫಿಕ್ ಸ್ವಯಂಸೇವಕ ಅಬ್ದುಲ್ ರವೂಫ್, ಸೈಕಲ್ ರಿಪೇರಿ ಮಾಡುವ ಮಾರಿಗುಡಿ ಆನಂದ ಮತ್ತು ಹಿರಿಯ ಸವಾರರಾದ 87ರ ಹರೆಯದ ರಾಮಚಂದ್ರ ರಾವ್, 77ರ ಹರೆಯದ ವಿಶ್ವನಾಥ್ ಮತ್ತು 77ರ ಹರೆಯದ ವಾಲ್ಟರ್ ಡಿಸೋಜಾರನ್ನು ಗೌರವಿಸಲಾಯಿತು.