ಐದು ಹತ್ತರ ನಾಣ್ಯ ಅಮಾನ್ಯವಾಗಿದೆಯೇ

ಬ್ಯಾಂಕಿನವರು ಸ್ಪಷ್ಟೀಕರಣ ನೀಡಲಿ

ಒಂದು ಸಾವಿರದಿಂದ ಐನೂರು ರೂಪಾಯಿಗಳ ನೋಟುಗಳು ಬ್ಯಾನ್ ಆದವು. 2000ದ, 500ರಿನ ಹೊಸ ನೋಟುಗಳು ಬಂದವು. ಚಿಲ್ಲರೆ ಸಮಸ್ಯೆ, ಜೆರಾಕ್ಸ್ ನೋಟುಗಳೂ, ಕಳ್ಳ ನೋಟುಗಳು ಬಂದೂ ಜನಸಾಮಾನ್ಯ ಹಿಂಡಿ ಹಿಪ್ಪೆಯಾದ. ಸಮಸ್ಯೆ ಇಲ್ಲಿಗೆ ಮುಗಿಯಲಿಲ್ಲ. ಈಗ 10 ರೂಪಾಯಿ ನಾಣ್ಯ, ಐದು ರೂಪಾಯಿ ನಾಣ್ಯವನ್ನೂ ಯಾರೂ ತೆಗೆದುಕೊಳ್ಳುವುದಿಲ್ಲ  ಕೇಳಿದ್ರೆ  ಟೀವಿಯಲ್ಲಿ  ಪತ್ರಿಕೆಯಲ್ಲಿ ಬಂದಿದೆ  ಇದೆರಡು ಸರಕಾರ ಬ್ಯಾನ್ ಮಾಡಿದೆ  ಎನ್ನುತ್ತಾರೆ  ಇದು ಎಷ್ಟು ಸತ್ಯ  ಯಾರಿಗೆ ಗೊತ್ತು  ಹೀಗೆ ಎಲ್ಲ ನೋಟು  ನಾಣ್ಯಗಳು ಬ್ಯಾನ್ ಆಗಿದೆ ಎಂದ್ರೆ  ಬ್ಯಾಂಕಿನವರು ಕೂಡಲೇ ಸ್ಪಷ್ಟೀಕರಣ ನೀಡಲಿ

  • ಎಸ್ ಎಂ ಪುತ್ತೂರು