ಐಪಿಎಲ್ ಬೆಟ್ಟಿಂಗಿನಿಂದ ಜನ ದೂರ ಉಳಿಯಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಜನಪ್ರಿಯ ಚುಟುಕು ಕ್ರಿಕೆಟ್ ಟೂರ್ನಿ ಈಗಾಗಲೇ ಆರಂಭಗೊಂಡಿದೆ. ಕಳೆದ ಆವೃತ್ತಿಗಳಲ್ಲಿ ಟೂರ್ನಿಗೆ ಕಪ್ಪುಚುಕ್ಕೆ ತಂದ ಮ್ಯಾಚ್ ಫಿಕ್ಸಿಂಗ್ ಈ ಬಾರಿ ನಡೆಯದಿರಲಿ. ಆಟಗಾರರು ಯಾವುದೇ ರೀತಿಯಲ್ಲೂ ಹಣದ ಆಸೆಗೆ ಬಲಿಯಾಗದೇ ಕ್ರೀಡಾಸ್ಫೂರ್ತಿ ಎತ್ತಿ ಹಿಡಿಯಲಿ. ಆಗ ಮಾತ್ರ ಕ್ರಿಕೆಟ್ ಆಟಕ್ಕೆ ನ್ಯಾಯ ಒದಗಿಸುವುದರ ಜೊತೆ ಜನರಲ್ಲಿ ಟೂರ್ನಿ ಬಗ್ಗೆ ನಂಬಿಕೆ ಉಳಿಯುತ್ತದೆ.
ಐಪಿಎಲ್ಲಿನಲ್ಲಿ ಬೆಟ್ಟಿಂಗ್ ದಂಧೆ ಬಲು ಜೋರಾಗಿ ನಡೆಯುತ್ತದೆ. ಕೆಲವರು ವರ್ಷವಿಡೀ ಇದಕ್ಕಾಗಿಯೇ ಕಾದು ಕುಳಿತು ಅಡ್ಡೆಗಳನ್ನು ಮಾಡಿಕೊಂಡು ಬೆಟ್ಟಿಂಗ್ ನಡೆಸುತ್ತಾರೆ. ಬೆಟ್ಟಿಂಗ್ ಮಾಯಾಜಾಲಕ್ಕೆ ಸಿಲುಕಿದ ಅನೇಕರು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಷ್ಟೋ ಪ್ರಕರಣ ನಡೆದಿವೆ. ಈ ಬಾರಿಯಾದರೂ ಇದರಿಂದ ಜನ ಎಚ್ಚೆತ್ತು ಬೆಟ್ಟಿಂಗಿನಿಂದ ದೂರ ಉಳಿಯಲಿ. ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಬೆಟ್ಟಿಂಗ್ ದಂಧೆ ನಡೆಸುವವರನ್ನು ಬಂಧಿಸುವತ್ತ ಮನಸ್ಸು ಮಾಡಲಿ

  • ಸುಕೇಶ್ ದೇವಾಡಿಗ  ಕಾರ್ಕಳ