ಕೇಂದ್ರದ ಶೋಷಣೆ ಪ್ರತಿಭಟಿಸಬೇಕಾಗಿದೆ

ನಮ್ಮ ಭಾರತ ದೇಶವು ಇದೀಗ ಪ್ರಕ್ಷೋಭೆಯಲ್ಲಿದೆ. ನೋಟುಗಳ ಸಮಸ್ಯೆಗಳನ್ನು ಬಗೆಹರಿಸಲು ಆರ್ ಬಿ ಐ ತಯಾರಾಗಬೇಕು. ಬಡವರು, ಮಧ್ಯಮ ವರ್ಗದವರು, ಜನಸಾಮಾನ್ಯರ ಬದುಕು ಬರಡಾಗುತ್ತಿದೆ. ಕಾಳಧನಿಕರು, ಕಳ್ಳನೋಟು ಚಲಾವಣೆಗಾರರಿಗೆ ಯಾವುದೇ ಬಿಸಿ ಇಲ್ಲ. ಈ ಸಂದರ್ಭದಲ್ಲಿ ಗಿಳಿವಿಂಡು ಉದ್ಘಾಟನೆಯನ್ನು ಆಚರಿಸುವುದನ್ನು ತಡೆಗಟ್ಟಬೇಕು. ಹಾರ್ಬರ್ ಉದ್ಘಾಟನೆಯು ಬೇಡ. ಕೇರಳದಲ್ಲಿರುವ ಸಾಮಾನ್ಯ ಸರಕಾರಿ ನೌಕರರಿಗೆ ತಿಂಗಳ ವೇತನ ಸಿಗದೆ ಪರದಾಡುತ್ತಿದ್ದಾರೆ. ನರೇಂದ್ರ ಮೋದಿ ಸರಕಾರವು ಈ ರೀತಿಯ ಶೋಷಣೆ ಮಾಡುವುದು ಯಾರಿಗೂ ಸರಿಯಾಗಿ ಕಾಣುವುದಿಲ್ಲ. ಆದ್ದರಿಂದ ಭಾರತದ ಸರ್ವಮತಗಳ ಪ್ರಜೆಗಳು ಶೋಷಣೆಗೆ ಎದುರಾಗಿ ಕೂಡಲೇ ಎಚ್ಚೆತ್ತು ಒಗ್ಗಟ್ಟಿನಿಂದ ಪ್ರತಿಭಟಿಸಲು ಶೀಘ್ರ ತಯಾರಾಗಬೇಕೆಂದು ವಿನಂತಿ.

  • ಬಿ ಕೆ ಗೌತಮ್ ಪ್ರಸಾದ್, ಮಂಗ್ಲಪಾಡಿ