ನಮ್ಮ ಜನ ಟೋಪಿ ಹಾಕಿಕೊಳ್ಳುವುದು ತಪ್ಪುತ್ತಿಲ್ಲ

ಖಾಲಿ ಚೆಕ್ಕಿಗೆ ಸಹಿ ಹಾಕಿ ಯಾರಿಗೂ ನೀಡಬೇಡಿ, ಎಟಿಎಂ ಪಿನ್ ನಂಬ್ರ ಯಾರಿಗೂ ಹೇಳಬೇಡಿ, ಎಟಿಎಂ ಕಾರ್ಡಿನ ಮೇಲೆ ಪಿನ್ ನಂಬ್ರ ಬರೆಯದಿರಿ, ಬ್ಯಾಂಕಿಗೆ ಹಣ ಕಟ್ಟಲು ಹೋದಾಗ ಅಪರಿಚಿತರ ಬಗ್ಗೆ ಗಮನವಿರಲಿ, ನೋಟು ಬೀಳಿಸಿ ನಿಮ್ಮ ಹಣ ಯಾಮಾರಿಸುವವರಿದ್ದಾರೆ ಎಚ್ಚರಿಕೆ, ನಿಮ್ಮ ಎಟಿಎಂ ಕಾರ್ಡ್ ಹಾಳಾಗಿದೆ ಎಂದು ಅದರ ನಂಬ್ರ ಕೇಳಿ ನಿಮ್ಮ ಪಿನ್ ನಂಬ್ರ ಕೇಳಿ ನಿಮ್ಮನ್ನು ಪಂಗನಾಮ ಹಾಕುವವರಿದ್ದಾರೆ ಎಚ್ಚರ. ಬ್ಯಾಂಕಿಗೆ ಹೋಗುವಾಗ, ಹಣ ತೆಗೆಯುವಾಗ ಎಚ್ಚರವಿರಲಿ, ಎಟಿಎಂ ಕಾರ್ಡನ್ನು ಜಾಗೃತೆಯಾಗಿರಿಸಿ, ಅಪರಿಚಿತರ ಸ್ನೇಹ ಮಾಡದಿರಿ.
ಇಷ್ಟೆಲ್ಲ ಸಲಹೆ ಹಲವು ಬರೆದರೂ ನಮ್ಮ ಜನ ಟೋಪಿ ಹಾಕಿಕೊಳ್ಳುತ್ತಿದ್ದಾರೆಂದರೆ ಇದು ಎಂತಹ ದುರಂತ

  • ಎಸ್ ಎಂ ಪುತ್ತೂರು