ಮುಲ್ಕಿ ಸರಕಾರಿ ಆಸ್ಪತ್ರೆ ವೈದ್ಯರ ಉಡಾಫೆ ವಿರುದ್ಧ ಜನಾಕ್ರೋಶ

ಶವ ಮಹಜರು ವಿಳಂಬ

ಮುಲ್ಕಿ : ಇಲ್ಲಿನ ಕಾರ್ನಾಡು ಸರಕಾರಿ ಆಸ್ಪತ್ರೆಯ ವೈದ್ಯರು ಶವ ಮಹಜರು ನಡೆಸಲು ವಿಳಂಬಿಸಿ ಸಂಬಂದಿಕರಲ್ಲಿ ಉಢಾಫೆಯಾಗಿ ವರ್ತಿಸಿದ್ದಾರೆ ಎಂದು ಹಳೆಯಂಗಡಿ ಪಂಚಾಯತಿ ಸದಸ್ಯ ಅಬ್ದುಲ್ ಖಾದರ್ ಸಹಿತ ನೂರಾರು ಮಂದಿ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆ ವೇಳೆಗೆ ಹಳೆಯಂಗಡಿಯ ಬೊಳ್ಳೂರು ಎಂಬಲ್ಲಿ ಬಸ್ಸು ಮತ್ತು ರಿಕ್ಷಾದ ನಡುವೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಹಳೆಯಂಗಡಿ ಇಂದಿರಾನಗರ ನಿವಾಸಿ ಸಾಧಿಕ್ ಎಂಬವರ ಮೃತದೇಹವನ್ನು ರಾತ್ರಿ ಸುಮಾರು 9 ಗಂಟೆಗೆ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿನ ಶವಾಗಾರದಲ್ಲಿರಿಸಲಾಗಿತ್ತು ಹಾಗೂ ಮರಣೋತ್ತರ ಪರೀಕ್ಷೆಗೆ ವೈದ್ಯರು ಮಂಗಳವಾರ ಬೆಳಿಗ್ಗೆ ಬರುವಂತೆ ಸಂಬಂದಿಕರಿಗೆ ಹೇಳಿದ್ದರು. ಅದರಂತೆ ಮಂಗಳವಾರ ಬೆಳಿಗ್ಗೆ ಸಂಬಂದಿಕರು ಬಂದು ವೈದ್ಯ ಡಾ ಅಜೀತ್ ಶೆಟ್ಟಿಯವರ ಬಳಿ  ಕೇಳಿದಾಗ “ಶವ ಮಹಜರು ನಡೆಸುವ ಸಿಬ್ಬಂದಿ ಮಂಗಳೂರಿಗೆ ಹೋಗಿದ್ದಾರೆ, 11 ಗಂಟೆ ಬಳಿಕ ಶವ ಮಹಜರು ನಡೆಸುತ್ತೇವೆ” ಎಂಬ ಉತ್ತರ ದೊರೆಒಯಿತು. ಇದರಿಂದ  ಕೆರಳಿದ ಮೃತರ ಸಂಬಂದಿಕರು ವೈದ್ಯರ ಅಸಡ್ಡೆಯ ಮಾತಿನ ವಿರುದ್ದ ಅಸಮಾದಾನ ವ್ಯಕ್ತಪಡಿಸಿದಾಗ ವೈದ್ಯರ ಜೊತೆ ಮಾತಿನ ಚಕಮಕಿ ನಡೆಯಿತು. ಆಗ ವೈದ್ಯರು ಜಾತಿ ನಿಂದನೆ ನಡೆಸಿದ್ದಾರೆ ಎಂದು ಮೃತರ ಸಂಬಂದಿಕರು ಗಂಭೀರ ಆರೋಪ ಮಾಡಿದ್ದಾರೆ.

ಕೂಡಲೇ ಪರಿಸ್ಥಿತಿ ವಕೋಪಕ್ಕೆ ಹೋಗುತ್ತಿರುವುದನ್ನು ಕಂಡು ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ನಿರೀಕ್ಷಕ ಮಂಜುನಾಥ್ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಈ ನಡುವೆ ವೈದ್ಯರು ಮೃತನ ಸಂಬಂದಿಕರ ಜೊತೆ ಉಢಾಫೆಯಾಗಿ ವರ್ತಿಸಿದ್ದಲ್ಲದೆ ಪೋಲೀಸ್ ಕೇಸು ಹಾಕುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಸಂಬಂದಿಕರು ಆರೋಪಿಸಿದ್ದಾರೆ.ಇಷ್ಟೆಲ್ಲಾ ಗೊಂದಲ ನಡೆದರೂ ವೈದ್ಯರು ಶವ ಮಹಜರು ನಡೆಸಲು ಮುಂದಾಗದಿದ್ದುದನ್ನು ಕಂಡು ಕೂಡಲೇ ಮೃತನ ಸಂಬಂದಿಕರು ಶಾಸಕ ಅಭಯಚಂದ್ರ ಜೈನಗೆ ದೂರು ನೀಡಿದ್ದಾರೆ. ಬಳಿಕ ನಡೆದ ವಿದ್ಯಮಾನಗಳಲ್ಲಿ ಶಾಸಕರ ದೂರವಾಣಿ ವೈದ್ಯರಿಗೆ ಹೋಗಿದ್ದು ಕೂಡಲೇ ಶವ ಪರೀಕೆಗೆ ಮುಂದಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕವೂ ಮೃತರ ಸಂಬಂದಿಕರ ವೈದ್ಯರು `ಜಾತಿ ನಿಂದನೆ’  ಮಾಡಿದ್ದಾರೆಂದು  ಕೋಪ ಕಮ್ಮಿಯಾಗುವ ಲಕ್ಷಣ ಕಾಣದೆ ವಿಕೋಪಕ್ಕೆ ತರಳುವ ಲಕ್ಷಣಗಳು ಕಾಣುತ್ತಿರುವಾಗ ಸ್ಥಳಕ್ಕೆ ಆಗಮಿಸಿದ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಧನಂಜಯ ಮಟ್ಟು ಮತ್ತು ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಸಮಾಧಾನಪಡಿಸಿ ವ್ಯದ್ಯರನ್ನು ತರಾಟೆಗೆ ತೆಗೆದುಕೊಂಡರು.ಈ ಸಂದರ್ಬ ವೈದ್ಯರು ಮಾತನಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊತೆ ಇದ್ದ ಕಾರಣ ವಿಳಂಬವಾಯಿತು ಹಾಗೂ ನಾನು ಯಾರಿಗೂ ಜಾತಿ ನಿಂದನೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದಾಗ ಅಲ್ಲಿಯೂ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.