ವಿವಿಧ ಬೇಡಿಕೆ ಆಗ್ರಹಿಸಿ ಪಿಂಚಣಿದಾರರ ಧರಣಿ

ಪಿಂಚಣಿ ಅಸೋಸಿಯೇಶನ್ ನಡೆಸಿದ ಪ್ರತಿಭಟನೆ

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಿ ಎಫ್ ಪಿಂಚಣಿದಾರರ ಅಸೋಸಿಯೇಶನ್ ವತಿಯಿಂದ ಪ್ರತಿಭಟನೆ ಹಮಿಕೊಳ್ಳಲಾಯಿತು.

ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಉಪ್ಪಳ ಗ್ರಾಮಾಧಿಕಾರಿ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಯಿತು.

ಪಿಂಚಣಿ ಪಟ್ಟಿಯಲ್ಲಿರುವವರನ್ನು ಬಿಪಿಎಲ್ ಲೀಸ್ಟಿನಲ್ಲಿ ಸೇರಿಸಿ, ರೇಶನ್ ಮೂಲಕ ಲಭಿಸುವ 2 ರೂ ಅಕ್ಕಿಯನ್ನು ಎಲ್ಲಾ ಪಿಂಚಣಿದಾರರಿಗೂ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಯಿತು. ಧರಣಿಯನ್ನು ಪಿ ಎಫ್ ಪಿಂಚಣಿದಾರರ ಅಸೋಸಿಯೇಶನ್ ಮುಖಂಡೆ ಬೇಬಿ ಶೆಟ್ಟಿ ಉದ್ಘಾಟಿಸಿದರು. ಪಿಂಚಣಿದಾರರ ಬೇಡಿಕೆಯನ್ನು ಸಂಬಂಧಪಟ್ಟವರು ಪರಿಗಣಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಲಾಗುವುದಾಗಿ ಅವರು ಎಚ್ಚರಿಕೆ ನೀಡಿದರು. ಪ್ರತಿಭಟನಾ ಧರಣಿಯಲ್ಲಿ ಹಲವಾರು ಮಂದಿ ಪಾಲ್ಗೊಂಡರು.