ಎಸ್ ಸಿ ಡಿ ಸಿ ಸಿ ಬ್ಯಾಂಕ್ ಕಾರ್ಯ ನಿರ್ವಹಣೆಗೆ ಅಮೆರಿಕಾ ಪೆನ್ಸಿಲ್ವೇನಿಯಾ ವಾರ್ಸಿಟಿಯಿಂದ ಶ್ಲಾಘನೆ

ಬ್ಯಾಂಕಿಗೆ ಭೇಟಿ ನೀಡಿದ ಅಮೆರಿಕಾದ ಅಧ್ಯಯನ ತಂಡ

ಮಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ವಿಶೇಷವಾಗಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿ ಡಿ ಸಿ ಸಿ) ಕಾರ್ಯನಿರ್ವಹಣೆಯನ್ನು ಅಮೆರಿಕಾದ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಪ್ರಾಧ್ಯಾಪಕರುಗಳ ಮತ್ತು ಅಧ್ಯಯನ ತಂಡ ಶ್ಲಾಘಿಸಿದೆ.

ಮಂಗಳವಾರ ನಗರದ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಈ ಅಧ್ಯಯನ ತಂಡ ಮೈಕ್ರೋ ಫೆನಾನ್ಸ್ ಮತ್ತು ಸ್ವಸಹಾಯ ಗುಂಪು ಯೋಜನೆಯ ಅನುಷ್ಠಾನದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಅಧ್ಯಯನ ನಡೆಸಿದೆ.

ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಎಂ ಎನ್ ರಾಜೇಂದ್ರಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, “ಬ್ಯಾಂಕ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಬಡವರ್ಗದ ಜನರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡುತ್ತಿವೆ. ಮಹಿಳಾ ಸಬಲೀಕರಣದ ಹಾದಿಯಲ್ಲಿ ಆದಾಯೋತ್ವನ್ನ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಮುಖ್ಯವಾಗಿ ಮಹಿಳೆಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಉನ್ನತ್ತಿಗೆ ಬ್ಯಾಂಕ್ ಪ್ರೇರಕ ಶಕ್ತಿಯಾಗಿದೆ” ಎಂದರು.

ಅಮೆರಿಕಾ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಸಮಾಜಸೇವೆ ಮತ್ತು ಅಧ್ಯಯನ ತಂಡದ ನೇತೃತ್ವ ವಹಿಸಿದ ಪೆಮೀಡಾ ಹ್ಯಾಂಡಿ ಮಾತನಾಡಿ, “ಎಸ್ ಸಿ ಡಿ ಸಿ ಸಿ ಬ್ಯಾಂಕಿನಿಂದ ಗ್ರಾಮಾಂತರ ಪ್ರದೇಶದ ಬಡವರ್ಗದ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಬ್ಯಾಂಕ್ ವಿಶೇಷವಾಗಿ ಮಹಿಳೆಯರ ಶಕ್ತಿ ಸಂವರ್ಧನೆಗೆ ಹೆಚ್ಚು ಮಹತ್ವವನ್ನು ನೀಡುತ್ತಿದೆ” ಎಂದರು

ಬ್ಯಾಂಕಿನ ಗುಣಾತ್ಮಕ ಬೆಳವಣೆಗೆಯಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಂದ್ರಕುಮಾರ್ ಅವರ ಅವಿರತ ಮುಂದಾಳತ್ವವನ್ನು ಪೆಮೀಡಾ ಹ್ಯಾಂಡಿ ಶ್ಲಾಘಿಸಿದರು.