ಪೀಎಂ ವರ್ಸಸ್ ಸೀಎಂ

ರಾಜ್ಯ ಚುನಾವಣಾ ರಂಗ

  • ಪ್ರಭು ಚಾವ್ಲಾ

2018ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಳತ್ತ ಗಮನ ಹರಿಸಿರುವ ಮೋದಿ ಸಿದ್ಧರಾಮಯ್ಯ ಸರ್ಕಾರದ ವೈಫಲ್ಯಗಳನ್ನೇ ಬಿಂಬಿಸುವ ಮೂಲಕ ಪ್ರಚಾರ ಅರಂಭಿಸಿದ್ದಾರೆ. ಸಂಸತ್ತಿನಲ್ಲಿ ಮೋದಿಯ ನೂರು ನಿಮಿಷಗಳ ಭಾಷಣ ಇದನ್ನೇ ಬಿಂಬಿಸುತ್ತದೆ.  ಪಶ್ಚಿಮ, ಉತ್ತರ ಮತ್ತು ಕೊಂಚ ಮಟ್ಟಿಗೆ ಪೂರ್ವ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿದ ನಂತರ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಮೋದಿ ಪಣ ತೊಟ್ಟಿದ್ದಾರೆ. ಗುಜರಾತದÀಲ್ಲಾದಂತೆ ಕರ್ನಾಟಕದಲ್ಲೂ ಸಹ ಮೋದಿ ಪಕ್ಷದ ಹೆಸರಿಗಿಂತಲೂ ತಮ್ಮ ಹೆಸರಿನಲ್ಲೇ ಚುನಾವಣೆ ಗೆಲ್ಲಲು ಹವಣಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ಧರಾಮಯ್ಯ ಸರ್ಕಾರ ಭ್ರಷ್ಟಾಚಾರದ ಕೂಪ ಎಂದು ಆರೋಪಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ವಾಗ್ದಾಳಿ ಅರಂಭಿಸಿದ್ದು ರಾಜ್ಯ ಕೊಲೆಗಡುಕರ ತಾಣವಾಗಿದೆ ಎಂದು ದೂಷಿಸಿದ್ದಾರೆ.

ಕರ್ನಾಟಕ ಸರ್ಕಾರವನ್ನು ಶೇ 10ರ ಸರ್ಕಾರ ಎಂದು ದೂಷಿಸುವ ಮೂಲಕ ಸಿದ್ಧರಾಮಯ್ಯ ಕಮಿಷನ್ ಆಧಾರಿತ ಆಡಳಿತ ನಡೆಸುತ್ತಿದ್ದಾರೆ ಎಂದು ಅರೋಪಿಸಿರುವ ಮೋದಿಯನ್ನು ಪ್ರಧಾನಿಯಾಗಲು ಅನರ್ಹ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.  ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ಮೋದಿಯನ್ನು ಮುಕ್ತ ಚರ್ಚೆಗೆ ಆಹ್ವಾನಿಸಿರುವ ಸಿದ್ಧರಾಮಯ್ಯ, ಲೋಕಪಾಲ್ ಸ್ಥಾಪಿಸುವಂತೆ, ನ್ಯಾಯಮೂರ್ತಿ ಲೋಯಾ ಸಾವಿನ ತನಿಖೆ ನಡೆಸುವಂತೆ ಮತ್ತು ಜಯಷಾ ಅವರ ಅಕ್ರಮ ಆಸ್ತಿಯನ್ನು ತನಿಖೆ ನಡೆಸುವಂತೆ ಆಗ್ರಹಿಸಿದ್ದು ಕರ್ನಾಟಕದಲ್ಲಿ ಕಳಂಕರಹಿತ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿಯಾಗಿ ಘೋಷಿಸುವಂತೆ ಸವಾಲೆಸೆದಿದ್ದಾರೆ.

ಈ ಸಂಘರ್ಷದಲ್ಲಿ ಬಿಜೆಪಿ ನಾಯಕರಾದ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ನೇಪಥ್ಯಕ್ಕೇ ತೃಪ್ತಿಪಟ್ಟುಕೊಂಡಂತಿದೆ. ಕರ್ನಾಟಕದ ಕೇಂದ್ರ ಮಂತ್ರಿಗಳೂ ಸಹ ಅಷ್ಟಾಗಿ ಮುನ್ನೆಲೆಗೆ ಬರುತ್ತಿಲ್ಲ. ಇತ್ತ ಸಿದ್ಧರಾಮಯ್ಯ ಸಹ ತಮ್ಮ ವರ್ಚಸ್ಸನ್ನು ಪಕ್ಷದ ವರ್ಚಸ್ಸಿಗಿಂತಲೂ ಹೆಚ್ಚಿಸಿಕೊಂಡಿದ್ದು ಚುನಾವಣಾ ಸಂಘರ್ಷವನ್ನು ರಾಜ್ಯ ಕಾಂಗ್ರೆಸ್ಸಿನ ಪ್ರತಿಷ್ಠೆಯ ಪಣ ಎಂದು ಪರಿಗಣಿಸಿದ್ದಾರೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷದ ಮತಗಳಿಕೆ ಶೇ 4ರಷ್ಟು ಹೆಚ್ಚಾಗಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಗಳು ಮೋದಿ ಮತ್ತು ಸಿದ್ಧರಾಮಯ್ಯ ನಡುವಿನ ಸಂಘರ್ಷವೇ ಆಗಲಿದೆ.

 

LEAVE A REPLY