…. ಕಾರು ಗುದ್ದಿ ಪಾದಚಾರಿ ಸಾವು

ಮೃತ ಅಬ್ದುಲ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಸ್ತೆ ದಾಟುತ್ತಿದ್ದ ಮಧ್ಯೆ ಅಮಿತ ವೇಗದಲ್ಲಿ ಆಗಮಿಸಿದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಧ್ಯ ವಯಸ್ಕರೊಬ್ಬರು ಮೃತಪಟ್ಟ ಘಟನೆ ಬಂದ್ಯೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ಬಂದ್ಯೋಡ್ ಮುಟ್ಟಂ ಕುನ್ನಿಲ್ ನಿವಾಸಿ ಅಬ್ದುಲ್ ರಹ್ಮಾನ್ (55) ಮೃತ ದುರ್ದೈವಿ. ಮೊಮ್ಮಗಳ ಮದುವೆ ಆಮಂತ್ರಣ ನೀಡಿ ಮರಳುತ್ತಿರುವ ಮಧ್ಯೆ ರಸ್ತೆ ದಾಟಲು ರಸ್ತೆ ಬದಿ ನಿಂತಿರುವಾಗ ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡಿ ಬಂದ ಡಸ್ಟರ್ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.