ಬೈಕ್ ಡಿಕ್ಕಿಯಾಗಿ ಪಾದಚಾರಿ ಗಾಯ

ಸಾಂದರ್ಭಿಕ ಚಿತ್ರ

ಕಾರ್ಕಳ : ರಸ್ತೆ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಕಾರ್ಕಳ ತಾಲೂಕಿನ ಬೋರ್ಕಟ್ಟೆ ತಿಮ್ಮಗುಡ್ಡೆ ನಿವಾಸಿ ಲೂಯಿಸ್ ಫೆರ್ನಾಂಡೀಸ್(78) ಎಂಬವರು  ಬೈಕ್ ಡಿಕ್ಕಿಯಾಗಿ ಗಾಯಗೊಂಡರು.

ಲೂಯಿಸ್ ಭಾನುವಾರ ಮನೆಯಿಂದ ಜೋಡುಕಟ್ಟೆಗೆ ಬಂದು ಸಂಜೆ ವಾಪಾಸ್ಸಾಗುತ್ತಿದ್ದಾಗ ಬೋರ್ಕಟ್ಟೆ ಕಡೆಯಿಂದ ಜೋಡುಕಟ್ಟೆ ಕಡೆಗೆ ಬೈಕ್ ಸವಾರ ಅಕ್ಷಯ್ ತನ್ನ ಬೈಕನ್ನು ಅತೀವೇಗವಾಗಿ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಲೂಯಿಸ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಾಯಗೊಂಡು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.