ಬೈಕ್ ಡಿಕ್ಕಿ, ಪಾದಚಾರಿ ಕಾಲಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಅಜಾಗರುಕತೆಯ ಚಾಲನೆಯಿಂದ ಮುನ್ನುಗ್ಗಿ ಬಂದ ಬೈಕ್ ಸವಾರ ಗುರುವಾರ ಸಂಜೆ ಎರ್ಮಾಳು ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ಪಾದಚಾರಿ ಕಾಲಿಗೆ ಗಂಭೀರ ಏಟು ತಗುಲಿದೆ.

ಗಾಯಗೊಂಡವರು ಎರ್ಮಾಳು ಗರೋಡಿ ಬಳಿ ನಿವಾಸಿ ಚಂದ್ರಶೇಖರ್. ಪಿಗ್ಮಿ ಸಂಗ್ರಹ ನಡೆಸುವುದಕ್ಕಾಗಿ ಏಕಮುಖ ಸಂಚಾರವಿರುವ ರಸ್ತೆಯ ಒಂದು ಪಾಶ್ವದಲ್ಲಿ ತನ್ನ ಸ್ಕೂಟರ್ ನಿಲ್ಲಿಸಿ ಮತ್ತೊಂದು ಪಾಶ್ವಕ್ಕೆ  ಹೋಗಲು ರಸ್ತೆ ದಾಟುತ್ತಿದಂತೆ ಉಚ್ಚಿಲ ನಿವಾಸಿ ಯುವಕರು ಚಲಾಯಿಸಿಕೊಂಡು ಬಂದ ಬೈಕ್ ನೇರವಾಗಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಆ ಸಂದರ್ಭ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲದ ಪರಿಣಾಮ  ಹೆಚ್ಚಿನ ಅಪಾಯ ಸಂಭವಿಸಿಲ್ಲ.

ತಕ್ಷಣ ಸ್ಥಳೀಯರು ಸಹಿತ ಬೈಕ್ ಸವಾರರು ಅಪಘಾತದ ತೀವ್ರತೆಗೆ ಮೊರ್ಛೆ ಹೋಗಿದ್ದ ಗಾಯಾಳುವನ್ನು ಪಡುಬಿದ್ರಿಯ ಸಿದ್ಧಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಲಿನ ಮಣಿಗಂಟಿಗೆ ಏಟಾದ ಪರಿಣಾಮ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ ಎಂಬುದಾಗಿ ಪರೀಕ್ಷಿಸಿದ ವೈಧ್ಯರು ತಿಳಿಸಿದ್ದು, ಒಂದು ವಾರÀ ಕಾಲ ಆಸ್ಪತ್ರೆಯಲ್ಲಿ ಇರುವ ಅನಿರ್ವಾಯತೆ ಇದೆ ಎನ್ನಲಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂಬುದಾಗಿ ವೈಧ್ಯರು ತಿಳಿಸಿದ್ದಾರೆ.


ರಿಕ್ಷಾ ಬೈಕ್ ಢಿಕ್ಕಿ : ಸವಾರನಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಶಿರ್ಲಾಲು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಶಿರ್ಲಾಲು ನಿವಾಸಿ ಪ್ರಸಾದ್ ಜೈನ್ ಎಂಬವರು ರಿಕ್ಷಾ ಹಾಗೂ ಬೈಕ್ ನಡುವೆ ಢಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡರು.

ಮಂಗಳವಾರ ಮಧ್ಯಾಹ್ನ ಪ್ರಸಾದ್ ಜೈನ್ ತನ್ನ ಬೈಕಿನಲ್ಲಿ ಅಂಡಾರು ಕಡೆಯಿಂದ ಶಿರ್ಲಾಲಿಗೆ ಹೋಗುವಾಗ ಗುಡ್ಡೆಯಂಗಡಿ ಎಂಬಲ್ಲಿ ಕೆರ್ವಾಶೆ ಕಡೆಯಿಂದ ಅಂಡಾರಿಗೆ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿಯಾಗಿ ಈ ಅಪಘಾತ ನಡೆದಿದೆ. ಗಾಯಗೊಂಡ ಬೈಕ್ ಸವಾರ ಪ್ರಸಾದ್ ಜೈನ್ ಅವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಸ್ಕೂಟಿಗೆ ಬೈಕ್ ಢಿಕ್ಕಿ, ಮಹಿಳೆ ಗಾಯ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಓಡಬಾಯಿಯಲ್ಲಿ ಮಹಿಳೆಯರು ಚಲಾಯಿಸುತ್ತಿದ್ದ ಸ್ಕೂಟಿಗೆ ಎದುರುಗಡೆಯಿಂದ ಅತೀ ವೇಗದಿಂದ ಬಂದ ಬೈಕೊಂದು ಅಪ್ಪ್ಪಳಿಸಿ ಮಹಿಳೆಗೆ ಗಾಯಗಳಾದವು. ಸ್ಕೂಟಿ ಚಲಾಯಿಸುತ್ತಿದ್ದ ಲತಾ ಎಂಬಾಕೆಯ ಬಲಭುಜ, ಪಾದಗಳಿಗೆ, ಮೂಗಿಗೆ ಗಾಯಗಳಾಗಿದ್ದು ಬೈಕ್ ಸವಾರ ನಾಗೇಶ್‍ರ ವಿರುದ್ಧ ಸುಳ್ಯ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.