ವಾಹನ ಡಿಕ್ಕಿ : ಪಾದಚಾರಿ ಸಾವು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಸಿದ್ದಾಪುರ ರಸ್ತೆಯ ಆಡಕಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದಾನೆ.

ಕಾನಸೂರಿನ ಸ್ವಾಗತ ಹೋಟೆಲಿನ ಮಾಲಿಕ ಮೋಹನ ಬಾಬು ಶಾನಭಾಗ ಮೃತಪಟ್ಟವರು. ಇವರು ಬೆಳಿಗ್ಗೆ ಕಾನಸೂರಿನಿಂದ ಅಡಕಳ್ಳಿ ತನಕ ವಾಕಿಂಗ್ ಹೋಗಿದ್ದು, ಮನೆಗೆ ಬಾರದೇ ಹೋದ್ದರಿಂದ ಕುಟುಂಬದವರು ಆಡಕಳ್ಳಿ ತನಕ ಬಂದಾಗ ಚರಂಡಿಯಲ್ಲಿ ಗಾಯಗೊಂಡು ಬಿದ್ದಿದ್ದು ಕಂಡುಬಂತು. ತಕ್ಷಣ ಅವರನ್ನು ಕಾನಸೂರು ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆತ ಮೃತಪಟ್ಟಿರುವ ವಿಷಯ ತಿಳಿಸಿದರು. ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

LEAVE A REPLY