ಹಿಟ್ ಎಂಡ್ ರನ್: ಪಾದಚಾರಿ ಸಾವು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿಗೆ ಸಮೀಪದ ಲೊರೆಟ್ಟೊ ಪದವು ಎಂಬಲ್ಲಿ ನಿನ್ನೆ ಸಂಜೆ ಹಿಟ್ ಆಂಡ್ ರನ್ ಪ್ರಕರಣವೊಂದಲ್ಲಿ ಪಾದಚಾರಿ ರೇಮಂಡ್ ಫೆರ್ನಾಂಡಿಸ್ (55) ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಚಾಲಕ ಕಾರು ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.