ಕಾರು ಡಿಕ್ಕಿ : ಪಾದಚಾರಿ ಮೃತ

ಮೃತ ರಾಮಚಂದ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಮಾವಿನಕಟ್ಟೆಯಲ್ಲಿ ನಡೆದಿದೆ.

ಕುಂಬಳೆ ಕೊಯಿಪ್ಪಾಡಿ ಕಡಪ್ಪುರದ ದಿ ದಿನೇಶ ಎಂಬವರ ಪುತ್ರ ರಾಮಚಂದ್ರ (35) ಮೃತ ವ್ಯಕ್ತಿ. ಮಾವಿನಕಟ್ಟೆಯ ಗೂಡಂಗಡಿಗೆ ನಡೆದು ಹೋಗುತ್ತಿದ್ದ ಇವರಿಗೆ ಕಾಸರಗೋಡು ಕಡೆಯಿಂದ ಬಂದ ಕಾರು ಡಿಕ್ಕಿ ಹೊಡದಿದೆ. ಗಂಭೀರ ಗಾಯಗೊಂಡ ರಾಮಚಂದ್ರರನ್ನು ಕೂಡಲೇ ಕುಂಬಳೆ ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.