ಪಾದಚಾರಿಗೆ ಬೈಕ್ ಗುದ್ದಿ ಸ್ಥಳದಲ್ಲೇ ಮೃತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕಡಬ ಠಾಣಾ ವ್ಯಾಪ್ತಿಯ ಇಚ್ಲಂಪಾಡಿ ಸೇತುವೆಯ ಬಳಿ ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ  ನಡೆದಿದೆ.ಮೃತ ಮಹಿಳೆಯನ್ನು ನೂಜಿಬಾಳ್ತಿಲ ಗ್ರಾಮದ ಕುಂಬ್ಲಾಯ ನಿವಾಸಿ ಹೊನ್ನಮ್ಮ (59) ಎಂದು ಗುರುತಿಸಲಾಗಿದೆ.

ಪ್ರಶಾಂತ್ ಎಂಬಾತ ಅತೀ ವೇಗ ಮತ್ತು ಅಜಾಗರೂಕÀತೆಯಿಂದ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಮೃತರ ಪುತ್ರ ಮೋನಪ್ಪ ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.