ರಸ್ತೆ ದಾಟುತ್ತಿದ್ದಾಗ ರಿಕ್ಷಾ ಡಿಕ್ಕಿ : ಪಾದಚಾರಿ ಸಾವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ, ಉದ್ಯಮಿ ಮಾವಂತೂರು ದೇವಪ್ಪ ಶೆಟ್ಟಿ (70) ಸಾವನ್ನಪ್ಪಿದ್ದಾರೆ. ನಗರದ ಆರ್ಟಿಒ ಕಚೇರಿ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ಪಾಂಡೇಶ್ವರ ರಸ್ತೆಯಿಂದ ಎ ಬಿ ಶೆಟ್ಟಿ ವೃತ್ತದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ರಸ್ತೆಗೆ ಬಿದ್ದ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಬಳಿಕ ಮೃತಪಟ್ಟಿದ್ದಾರೆ.

ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಲಯನ್ಸ್ ಪ್ರಾಂತ ಸಂಯೋಜಕರಾಗಿದ್ದಾರೆ. ಸ್ಥಳೀಯ  ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಶ್ರೀ ಬಲವಂಡಿ ಪಿಲಿಚಾಮುಂಡಿ ದೈವಸ್ಥಾನದ ಧರ್ಮದರ್ಶಿಯೂ ಆಗಿದ್ದರು. ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 

LEAVE A REPLY