ಕಾರು ಡಿಕ್ಕಿ : ಪಾದಚಾರಿ ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪಾದಚಾರಿಗೆ ಕಾರೊಂದು ಡಿಕ್ಕಿ ಹೊಡೆದ ಅಪಘಾತದಲ್ಲಿ ಪಾದಚಾರಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬೇಕರಿ ಸಾಮಗ್ರಿಗಳನ್ನು ಮಾರಾಟ ಮಾಡುವ ತಮಿಳ್ನಾಡು ನಿವಾಸಿ ಪ್ರಸ್ತುತ ಪಳ್ಳಿಕ್ಕೆರೆಯಲ್ಲಿ ವಾಸವಾಗಿರುವ ಗಣೇಶ ಅಸ್ಪತ್ರೆಗೆ ದಾಖಲಾದ ವ್ಯಕ್ತಿ. ವ್ಯಕ್ತಿಗೆ ಡಿಕ್ಕಿ ಹೊಡೆದ ಕಾರು ಬಳಿಕ ಮರವೊಂದಕ್ಕೆ ಗುದ್ದಿದ್ದು, ಅಪಘಾತದಿಂದ ಕಾರಿನ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರೂ ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ.

LEAVE A REPLY