ಕಾರು ಡಿಕ್ಕಿ, ಪಾದಾಚಾರಿ ಗಂಭೀರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಮಿತ ವೇಗದಲ್ಲಿ ಆಗಮಿಸಿದ ಕಾರೊಂದು ಇನ್ನೊಂದು ವಾಹನವನ್ನು ಓವರಟೇಕ್ ಮಾಡುತ್ತಿರುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತಿದ್ದ ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಿಗ್ಗೆ ಮಂಜೇಶ್ವರ  ಜಂಕ್ಷನಿನಲ್ಲಿ ಸಂಭವಿಸಿದೆ.

ದೇರಳಕಟ್ಟೆ ಸಮೀಪದ ಮಂಜನಾಡಿ ನಿವಾಸಿ ಕೃಷಿಕ ಮಮ್ಮುಂಞÂ (60) ಅಪಘಾತಕ್ಕೀಡಾದ ವ್ಯಕ್ತಿ. ಇವರನ್ನು ಕೂಡಲೇ ಸ್ಥಳೀಯರು ದೇರಳಕಟ್ಟೆಯ ಖಾಸಗಿ ಅಸ್ಪತ್ರೆಯೊಂದರಲ್ಲಿ ದಾಖಲಿಸಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಪಾದಾಚಾರಿ ಕಾರಿನಿಂದ ಮೇಲೆಗೆ ಎಸೆಯಲ್ಪಟ್ಟು ರಸ್ತೆಗೆ ಅಪ್ಪಳಿಸಿದ್ದಾರೆ. ಮೇಲ್ಪರಂಬದಿಂದ ಮಂಗಳೂರು ಆಸ್ಪತ್ರೆಗೆ ತೆರಳುತಿದ್ದ ಅಬೂಬಕ್ಕರ್ ಹಾಗೂ ಕುಟುಂಬ ಸಂಚರಿಸುತ್ತಿದ್ದ ಕಾರು ಚಾಲಕನ ಅವಾಂತರದಿಂದ ಈ ದುರ್ಘಟನೆ ಸಂಭವಿಸಿದೆ. ಗಾಯಾಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಚಾಲಕ ಕಾರಿನಿಂದ ಹೊರಗಿಳಿಯದೇ ಗಾಯಾಳುವನ್ನು ಮೇಲಕ್ಕೆತ್ತದೇ ಇದ್ದದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.