ಹೊಲಿಗೆ ತರಬೇತಿ ಕೇಂದ್ರಕ್ಕೆ ಏಕಾಏಕಿ ಬೀಗ ಹಾಕಿದ ಪಿಡಿಓ : ಶಿಬಿರಾರ್ಥಿಗಳಿಗೆ ಸಮಸ್ಯೆ

ಕರಾವಳಿ ಅಲೆ ವರದಿ
ಕುಮಟಾ : ತಾಲೂಕಿನ ದಿವಗಿ ಗ್ರಾಮ ಪಂಚಾಯತ ಪಿಡಿಓ ಅವರು ಏಕಾಏಕಿ ಯಾವುದೇ ಕಾರಣ ನೀಡದೆ ಹೊಲಿಗೆ ತರಬೇತಿ ಕೇಂದ್ರಕ್ಕೆ ಬೀಗ ಹಾಕುವ ಮೂಲಕ ಹೊಲಿಗೆ ತರಬೇತಿದಾರ ಮಹಿಳೆಯರಿಗೆ ತ್ರಿಶಂಕು ಸ್ಥಿತಿ ಉಂಟುಮಾಡುವ ಜೊತೆಗೆ ಸಮಸ್ಯೆಯನ್ನು ತಂದೊಡ್ಡಿದ್ದಾರೆ. ಅಲ್ಲದೇ ಇದ್ದಕಿದ್ದಂತೆ ತರಬೇತಿ ಕೇಂದ್ರಕ್ಕೆ ಸೋಮವಾರ ಬೀಗ ಹಾಕುವ ಮೂಲಕ ಬಡ ನಿರೋದ್ಯೋಗಿಗಳ ಬಾಳಿನಲ್ಲಿ ದಿವಗಿ ಪಂಚಾಯತ ಆಟವಾಡಿದೆ.
ತಾಲೂಕಿನ ದಿವಗಿಯ ನಿರುದ್ಯೋಗಿ ಮಹಿಳೆಯರಿಗೆ ಎಂದು ಯಶೋಧರ ನಾಯ್ಕ ಟ್ರಸ್ಟ್ ವತಿಯಿಂದ ಹೋಲಿಗೆ ತರಬೇತಿ ಕೇಂದ್ರವನ್ನು ನಡೆಸಲಾಗುತಿತ್ತು. ಅದು ದಿವಗಿ ಪಂಚಾಯತಿಗೆ ಒಳಪಟ್ಟ ಕಟ್ಟಡದಲ್ಲಿ ನಡೆಯುತ್ತಿದ್ದು, ಕಾನುನಾತ್ಮಕವಾಗಿ ಪರವಾನಿಗೆ ಕೂಡ ಪಡೆದಿತ್ತು. ಇನ್ನೆರಡು ತಿಂಗಳು ಪರವಾನಿಗೆಯ ಸಮಯವಿದೆ. ಆದರೆ ಪಂಚಾಯತ ಪಿಡಿಓ ತರಬೇತಿ ಕೇಂದ್ರಕ್ಕೆ ಬೀಗ ಹಾಕುವ ಮೂಲಕ ಹೊಲಿಗೆ ತರಬೇತಿದಾರ ಮಹಿಳೆಯರಿಗೆ ತ್ರಿಶಂಕು ಸ್ಥಿತಿ ಉಂಟು ಮಾಡುವ ಜೊತೆಗ ಸಮಸ್ಯೆಯನ್ನು ತಂದೊಡ್ಡಿದ್ದಾರೆ. ಈ ಬಗ್ಗೆ ಪಿಡಿಓ ಅವರನ್ನು ನೋಡಲು ಹೋದರೆ ತಮ್ಮ ಕೈಗೆ ಸಿಗದೆ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಈ ಬಗ್ಗೆ ನೊಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ ನಾವು ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಪಂಚಾಯತಗೆ ಮನವಿ ನೀಡಿ ಎಚ್ಚರಿಸಿದ್ದಾರೆ.

LEAVE A REPLY