ವೈದ್ಯರು ಹೇಳುವ ಚಿಕಿತ್ಸೆ ಬಗ್ಗೆ ಎಚ್ಚರ

ಕೆಲವು ಖಾಸಗಿ ಕ್ಲಿನಿಕ್ಕುಗಳಲ್ಲಿ ಡಾಕ್ಟರುಗಳು ಸಣ್ಣ ಕಾಯಿಲೆಗಳಿಗೂ ಲ್ಯಾಬೋರೇಟರಿಗಳಿಗೆ ಸ್ಕ್ಯಾನಿಂಗ್, ಬ್ಲಡ್, ಯುರೀನ್ ಪರೀಕ್ಷೆಗಳಿಗೆ ರೆಕಮಂಡ್ ಮಾಡುತ್ತಾರೆ.  ಇಲ್ಲಿ ಕೂಡ ನಾವು ಮೋಸ ಹೋಗುತ್ತಿದ್ದೇವೆ.

ನಿಮಗೆ ಗೊತ್ತಾ ? ಆಸ್ಪತ್ರೆಗಳು ತಮ್ಮಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ, ಸರ್ಜನುಗಳಿಗೆ ತಿಂಗಳಿಗೆ 2-3 ಲಕ್ಷ ರೂಪಾಯಿ ಸಂಬಳವನ್ನು ಕರಾರಿನ ಮೇಲೆ ನೀಡುತ್ತಿದ್ದು ಇದಕ್ಕೆ ಪ್ರತಿಯಾಗಿ ಡಾಕ್ಟರುಗಳು ಕೂಡ ಆಸ್ಪತ್ರೆಯ ಆದಾಯಕ್ಕೆ ಕುಂದು ಉಂಟಾಗದಂತೆ ಕೆಲಸ ಮಾಡಬೇಕಾಗುತ್ತದೆ. ಅವರು 4-5 ಲಕ್ಷ ರೂಪಾಯಿಯಷ್ಟು ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಬಿ ಪಿ, ಶುಗರ್ ಟೆಸ್ಟ್ ಇತ್ಯಾದಿ ಪರೀಕ್ಷೆಗಳನ್ನು ರೋಗಿಗಳಿಗೆ (ಪರೀಕ್ಷೆ ಅಗತ್ಯ ಇಲ್ಲದಿದ್ದರೂ) ಬರೆದು  ಕೊಡಬೇಕಂತೆ. ಅಲ್ಲದೆ ಶಸ್ತ್ರಚಿಕಿತ್ಸೆ ಅಗತ್ಯ ಇಲ್ಲದಿದ್ದರೂ ತಿಂಗಳಲ್ಲಿ 25 ಅಪರೇಷನ್ ಮಾಡಲೇಬೇಕಂತೆ.

ಇದು ಧರ್ಮಾರ್ಥ (ಚಾರಿಟಿ) ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ, ಆದರೆ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಖಡ್ಡಾಯವಾಗಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ಅನಗತ್ಯ ಸರ್ಜರಿ, ಅಪಾಯಕಾರಿ ಪ್ರಿಮ್ಯಾಚರ್ ಕ್ಯಾಟರಾಕ್ಟ್ ಸರ್ಜರಿ ಮಾಡಲಾಗುತ್ತದೆ. ಆದ್ದರಿಂದ ಎಚ್ಚರವಾಗಿರಿ.

ದಯವಿಟ್ಟು ನಿಮ್ಮ ಮೆಡಿಕಲ್ ಇನ್ಸೂರೆನ್ಸ್ ತೋರಿಸಬೇಡಿ, ಚರ್ಚಿಸಬೇಡಿ. ಅಂತಹ ಆಸ್ಪತ್ರೆಗಳಲ್ಲಿ ಯಾವತ್ತೂ “ಅದೆಷ್ಟು ಖರ್ಚಾದರೂ ಪರವಾಗಿಲ್ಲ, ದಯವಿಟ್ಟು ಜೀವ ಉಳಿಸಿ” ಎನ್ನಬೇಡಿ. ವೈದ್ಯರು ನಿಮ್ಮನ್ನು ಭಯಪಡಿಸಿದರೆ ಹೆಚ್ಚು ಅಲೋಚಿಸಬೇಡಿ. ಅಲ್ಲಿ ಅಡ್ಮಿಶನ್ ಕ್ಯಾನ್ಸಲ್ ಮಾಡಿಸಿ, ಅವರು ನೀಡಿರುವ ಮೆಡಿಕಲ್ ರಿಪೆÇೀರ್ಟ್  meಜiಛಿಚಿಟ@meಜiseಟಿse.meoಡಿ ಅಥವಾ meಜiseಟಿseheಚಿಟಣh.ಛಿomಗೆ ಮೇಲ್ ಮಾಡಿ. ಅಥವಾ 7026646022ಕ್ಕೆ ಕರೆ ಮಾಡಿ.

ಇಲ್ಲಿನ ಡಾಕ್ಟರುಗಳು ನಿಮ್ಮ ರಿಪೋರ್ಟ್ ಓದಿ ಕೂಡಲೇ ಮುಂದಿನ ಚಿಕಿತ್ಸೆಗೆ ಸೂಚಿಸುತ್ತಾರೆ. ದೇಶದ 21 ನಗರಗಳಲ್ಲಿ ಈ ಸೇವೆ ನೀಡಲಾಗುತ್ತಿದ್ದು ಮಂಗಳೂರು, ಉಡುಪಿಗಳಲ್ಲೂ ಲಭ್ಯ.ಇನ್ನು ಕೆಲವು ಖಾಸಗಿ ಕ್ಲಿನಿಕ್ಕುಗಳÀಲ್ಲಿ ಡಾಕ್ಟರುಗಳು ಸಣ್ಣ ಕಾಯಿಲೆಗಳಿಗೂ ನಗರದ ಬೇರೆ ಕಡೆ ಕಾರ್ಯಾಚರಿಸುತ್ತಿರುವ ಲ್ಯಾಬೋರೇಟರಿಗÀಳಿಗೆ ಸ್ಕ್ಯಾನಿಂಗ್, ಬ್ಲಡ್, ಯುರೀನ್ ಪರೀಕ್ಷೆಗಳಿಗೆ ರೆಕಮಂಡ್ ಮಾಡುವುದು ತಮಗೆ ಗೊತ್ತಿರಬಹುದು. ಇಲ್ಲಿ ಕೂಡ ನಾವು ಮೋಸ ಹೋಗುತ್ತಿದ್ದೇವೆ. ಲ್ಯಾಬೋರೇಟರಿಯವರು ಪ್ರತಿ ಕ್ಲಿನಿಕ್ ಮತ್ತು ಸರ್ಜನ್ ಜತೆ ಒಪ್ಪಂದ ಮಾಡಿರುತ್ತಾರೆ, “ನಿಮ್ಮ ಹತ್ತಿರ ಬರುವ ಎಲ್ಲಾ ರೋಗಿಗಳನ್ನು ನಮ್ಮಲ್ಲಿಗೆ ಕಳಿಸಿದರೆ ನಿಮಗೆ ಇಂತಿಷ್ಟು (50%ವರೆಗೆ) ಕಮಿಷನ್ ನೀಡುತ್ತೇವೆ” ಎಂದು.

ಇದು ಪತ್ತೆ ಹಚ್ಚಲು ಸುಲಭ. ನಿಮ್ಮನ್ನು ಹಾಗೆ ಯಾವುದಾದರೂ ಲ್ಯಾಬೋರೇಟರಿಗೆ ಕಳಿಸಿದರೆ ಅಲ್ಲಿ ಸಿಗುವ ರಿಪೆÇೀರ್ಟ್ ಮತ್ತೆ ನಿಮ್ಮ ಡಾಕ್ಟರಿಗೆ ತೋರಿಸುವಾಗ ಅವರ ಮುಖ ನೋಡಿ. ಅವರು ಅದನ್ನು ಪೂರ್ತಿ ಓದುವುದಿಲ್ಲ. ಓದಿದ ಹಾಗೆ ನಟಿಸುತ್ತಾರೆ. ಇದು ತಮ್ಮ ಗಮನಕ್ಕೆ ಬಂದರೆ ಅಲ್ಲಿ ಡಾಕ್ಟರ್ ಮತ್ತು ಲ್ಯಾಬೋರೇಟರಿ ನಡುವೆ ಅಜಸ್ಟಮೆಂಟ್ ಇರೋದು ಸ್ಪಷ್ಟ.

ಎಚ್ಚರವಾಗಿರಿ ನಾಗರಿಕರೇ. (ಸೋಷಿಯಲ್ ಮೀಡಿಯಾದಲ್ಲಿ ಪ್ರಕಟ )