ವಿಳಾಸದ ಪುರಾವೆಯಾಗಿ ಇನ್ನು ಪಾಸ್ಪೋರ್ಟ್ ಉಪಯೋಗಿಸಲಾಗದು

 

ನವದೆಹಲಿ : ಇನ್ನು ಮುಂದೆ ಪಾಸ್ಪೋರ್ಟ್ ಹೊಂದಿರುವವರು ಅದನ್ನು ತಮ್ಮ ವಿಳಾಸದ ಪುರಾವೆಯನ್ನಾಗಿ ಬಳಸುವಂತಿಲ್ಲ. ಹೊಸದಾಗಿ ಬಿಡುಗಡೆಗೊಳ್ಳಲಿರುವ ಪಾಸ್ಪೋರ್ಟುಗಳಲ್ಲಿ ಅದನ್ನು ಹೊಂದಿರುವವರ ವಿಳಾಸ ಕೂಡ ಇರುವುದಿಲ್ಲ.

ಸರಕಾರ ಎಲ್ಲಾ ಸೇವೆಗಳಿಗೂ ಆಧಾರ್ ಕಡ್ಡಾಯಗೊಳಿಸುವ ಭರದಲ್ಲಿರುವ ಈ ಸಂದರ್ಭದಲ್ಲಿ ಇಂತಹ ಒಂದು ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ನೀಡಲಾಗುವ ಪಾಸ್ಪೋರ್ಟುಗಳಲ್ಲಿ ಅದನ್ನು ಹೊಂದಿರುವವರ  ವಿಳಾಸವಿರುವುದಿಲ್ಲ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿಯಂತೆ ನಾಸಿಕ್ ನಗರದಲ್ಲಿರುವ ಇಂಡಿಯನ್ ಸೆಕ್ಯುರಿಟಿ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳಲಿರುವ ಹೊಸ ಪಾಸ್ಪೋರ್ಟುಗಳಲ್ಲಿ ಕೊನೆಯ ಪುಟ ಇರುವುದಿಲ್ಲ. ಈ ಪುಟದಲ್ಲಿ ಈ ಹಿಂದೆ ಪಾಸ್ಪೋರ್ಟ್ ಹೊಂದಿರುವವರ ಹೆಸರು, ಪತಿ/ಪತ್ನಿಯ ಹೆಸರು ವಿಳಾಸ ಮತ್ತಿತರ ಮಾಹಿತಿಯಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಸಮಿತಿಯೊಂದು ಇತ್ತೀಚೆಗೆ ಪಾಸ್ಪೋರ್ಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಚರ್ಚೆಗಳನ್ನು ನಡೆಸಿದೆಯೆಂದು ಸಚಿವಾಲಯ ಮಾಹಿತಿ ನೀಡಿದೆ.

 

 

LEAVE A REPLY